ಮೇಘಾಲಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ
ಷಿಲ್ಲಾಂಗ್, ಮೇ.25: ಕಾಂಗ್ರೆಸ್ ನೇತೃತ್ವದ ಮೇಘಾಲಯ ಸರ್ಕಾರ ವಿಧಾನಸಭೆಯಲ್ಲಿ ಇಂದು ಬಹುಮತ ಗಳಿಸಿದೆ. ಮೇಘಾಲಯದ ಮುಖ್ಯಮಂತ್ರಿ ಡಿಡಿ ಲಪಂಗ್ ಅಧಿಕಾರ ಮುಂದುವರೆಯಲಿದೆ.
60 ಸದಸ್ಯರ ವಿಧಾನಸಭೆಯಲ್ಲಿ 34 ಸದಸ್ಯರ ಬೆಂಬಲವನ್ನು ಸಿಎಂ ಲಪಂಗ್ ಅವರು ಧ್ವನಿ ಮತಗಳ ಮೂಲಕ ಪಡೆದು ವಿಜಯಿಯಾಗಿದ್ದಾರೆ.ಮೇ.13 ರಂದು ಐದನೇ ಬಾರಿ ಮುಖ್ಯಮಂತ್ರಿಯಾಗಿ ಲಪಂಗ್ ಅಧಿಕಾರ ವಹಿಸಿಕೊಂಡಿದ್ದರು.15 ದಿನದೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಆರ್ ಎಸ್ ಮುಷಹರಿ ಸೂಚನೆ ನೀಡಿದ್ದರು. ಬಹುಮತ ಸಾಬೀತಾದ ನಂತರ ಕಾಂಗ್ರೆಸ್ ವಿಧಾನಸಭಾ ಸದಸ್ಯ ಹಾಗೂ ಮಾಜಿ ಸಚಿವ ಚಾರ್ಲ್ಸ್ ಪಿಂಗ್ರೋಪ್ ಅವರು ಸಭಾಪತಿ ಸ್ಥಾನವನ್ನು ಅಲಂಕರಿಸಿದರು.
(ಏಜೆನ್ಸೀಸ್ )












Click it and Unblock the Notifications