ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎ ಅಂಗಪಕ್ಷಗಳ ಸಭೆ ಇಂದು

By Staff
|
Google Oneindia Kannada News

ನವದೆಹಲಿ. ಮೇ. 20 : ನೂತನ ಸರಕಾರ ರಚನೆ ಕುರಿತಂತೆ ಚುನಾವಣೆ ಪೂರ್ವದಲ್ಲಿ ಯುಪಿಎಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳೊಂದಿಗೆ ಕಾಂಗ್ರೆಸ್ ಮುಖಂಡರ ಮಹತ್ವದ ಸಭೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತುಪ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಸಂಪುಟ ಸಚಿವ ಸ್ಥಾನ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ನೂತನ ಸರಕಾರ ರಚನೆಗೆ ಆಹ್ವಾನಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಶುಕ್ರವಾರ ಮನಮೋಹನ್ ಸಿಂಗ್ ನೇತೃತ್ವದ ಹೊಸ ಸರಕಾರ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಎಡಪಕ್ಷಗಳ ಮಣಿಸಿ ಪಶ್ಚಿಮ ಬಂಗಾಲದಲ್ಲಿ 19 ಸಂಸದರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಚಿವ ಸ್ಥಾನ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಡಿಎಂಕೆ ನಾಯಕ ಎಂ ಕರುಣಾನಿಧಿ ಅವರು ಮಂಗಳವಾರ ಸೋನಿಯಾ ಅವರನ್ನು ಭೇಟಿ ಕೇಂದ್ರ ಸಂಪುಟದಲ್ಲಿ 5 ಸಚಿವ ಸ್ಥಾನ ನೀಡಬೇಕು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ ಯಪಿಎ ಸರಕಾರಕ್ಕೆ ಬಿಎಸ್ಪಿ ಬಾಹ್ಯ ಬೆಂಬಲ ನೀಡಲು ಮುಂದೆ ಬಂದಿದ್ದರೆ, ಎಸ್ಪಿ ಹಾಗೂ ಜೆಡಿಎಸ್ ಷರತ್ತಿಲ್ಲದೆ ಬೆಂಬಲ ಘೋಷಿಸಿವೆ. ಸದ್ಯ ಯುಪಿಎ ಸರಕಾರದ ಮ್ಯಾಜಿಕ್ ಸಂಖ್ಯೆ 318 ಆಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X