ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಗೆದ್ದವರು ಬಿದ್ದವರ ವಿವರಗಳು

By Staff
|
Google Oneindia Kannada News

Janardhan Swamy
ಚಿತ್ರದುರ್ಗ,ಮೇ.17: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಶನಿವಾರ ನಗರದ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜನಾರ್ಧನಸ್ವಾಮಿಯವರು 3,70,962 ಮತಗಳನ್ನು ಪಡೆಯುವ ಮೂಲಕ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜನಾರ್ಧನಸ್ವಾಮಿಯವರು 1,35,656 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿಯಾದ ಭಾರತೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಾ;ಬಿ.ತಿಪ್ಪೇಸ್ವಾಮಿಯವರು 2,35,306 ಮತಗಳನ್ನು ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ 11ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಲೋಕಸಭಾ ಕ್ಷೇತ್ರವು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಕ್ಷೇತ್ರಗಳನ್ನು ಒಳಗೊಂಡಿದೆ.

ಕ್ಷೇತ್ರದಲ್ಲಿ 15,33,844ಮತದಾರರಿದ್ದು ಏಪ್ರಿಲ್ 23 ರಂದು ನಡೆದ ಮತದಾನದಲ್ಲಿ8,36,127 ಮತದಾರರು ಮತ ಚಲಾಯಿಸಿದ್ದರು. ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಹೊರತುಪಡಿಸಿ ಜಾತ್ಯಾತೀತ ಜನತಾದಳದ ಎಂ.ರತ್ನಾಕರ್ 1,46,030,ಮತ್ತು ಬಹುಜನ ಸಮಾಜವಾದಿ ಪಕ್ಷದ ಎಂ.ಜಯಣ್ಣ 28,713, ರಾಷ್ಟ್ರೀಯ ಜನತಾದಳದ ಶಶಿಶೇಖರ್ ನಾಯಕ್ 16,258, ಮತ್ತು ಪಕ್ಷೇತರರಾದ ಎಂ.ಕುಂಬಯ್ಯ 4123,ಗಣೇಶ3727, ಕೆ.ಹೆಚ್.ದುರ್ಗಸಿಂಹ5333, ರಾಮಚಂದ್ರಪ್ಪ 4591,ಬಿ.ಸುಜಾತ 5393ಹಾಗೂ ಹನುಮಂತಪ್ಪ ತೇಗನೂರು 15,373 ಮತಗಳನ್ನು ಪಡೆದಿದ್ದಾರೆ. 1081 ಅಂಚೆ ಮತಪತ್ರಗಳು ಬಂದಿದೆ ಇದರಲ್ಲಿ ೩೧೮ ಮತಗಳು ತಿರಸ್ಕೃತಗೊಂಡಿವೆ.

(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X