ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮೈತ್ರಿ ಖತಂ, ಲಾಲು ಪಶ್ಚಾತಾಪ

By Staff
|
Google Oneindia Kannada News

ನವದೆಹಲಿ, ಮೇ. 16 : ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡ ಲಾಲು ಪ್ರಸಾದ್ ಕಾಂಗ್ರೆಸ್ ವಿರುದ್ಧ ಮನಬಂದಂತೆ ಟೀಕಿಸಿದ್ದರು. ಆದರೀಗ ಮಾತು ಬದಲಿಸಿರುವ ಲಾಲು, ಕಾಂಗ್ರೆಸ್ಸೊಂದಿಗೆ ಮೈತ್ರಿ ಕಡಿದುಕೊಂಡಿದ್ದು ವಿಷಾನೀಯ ಸಂಗತಿ ಎಂದು ಹೇಳಿದ್ದಾರೆ. ಬಿಹಾರ್ ದಲ್ಲಿ ಪಕ್ಷ ಸೋತು ಸುಣ್ಣವಾಗಿರುವ ಲಾಲು ಅವರಿಗೆ ತಮ್ಮ ತಪ್ಪಿನ ಅರಿವಾಗಿ ದಿಕ್ಕು ಕಾಣದಂತಾಗಿ ಹೋಗಿದ್ದಾರೆ.

ಎರಡು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಲಾಲು, ಪಾಟಲೀಪುತ್ರದಲ್ಲಿ ಜೆಡಿಯು ರಂಜನ್ ಪ್ರಸಾದ್ ಯಾದವ್ ಅವರ ವಿರುದ್ಧ ಸೋಲುನುಭವಿಸಿದ್ದಾರೆ, ಆದರೆ, ಶರಣ್ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಲೋಕಜನಶಕ್ತಿಯೊಂದಿಗಿನ ಮೈತ್ರಿಯನ್ನು ಜನತೆ ತಿರಸ್ಕರಿಸಿದ್ದಾರೆ. ಜನರ ತೀರ್ಪನ್ನು ನಾನು ಸ್ವೀಕರಿಸುವೆ. ಬಿಹಾರ್ ದಲ್ಲಿ ಆರ್ ಜೆಡಿಗೆ ಸೋಲುಂಟಾಗಿದೆ. ಅದಕ್ಕೆ ಕಾರಣಗಳನ್ನು ಮುಂದಿನ ದಿನಗಳಲ್ಲಿ ಹುಡುಕಾಟ ನಡೆಸಲಿದ್ದೇನೆ ಎಂದು ಲಾಲು ಪ್ರಸಾದ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಸೋತಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡ ಲಾಲು, ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವಲ್ಲಿ ಮತದಾರ ಮಹತ್ವದ ಪಾತ್ರವಹಿಸಿದ್ದಾನೆ ಎಂದರು. ಜಾತ್ಯತೀತ ಪಕ್ಷಗಳ ಕೇಂದ್ರ ಅಧಿಕಾರ ಚುಕ್ಕಾಣಿ ಹಿಡಿಯುದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಂ ವಿಲಾಸ್ ಪಾಸ್ವಾನ್, ಕೋಮುವಾದಿಗಳಿಗೆ ಮತದಾರ ಪಾಠ ಕಲಿಸಿದ್ದಾರೆ. ಹಾಜೀಪುರ್ ಲೋಕಸಭೆ ಕ್ಷೇತ್ರದಲ್ಲಿ ಪಾಸ್ವಾನ ಸೋತಿದ್ದಾರೆ.

(ಏಜನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X