ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಪ್ಟನ್ ವೇದಿಕೆ ಇದೀಗ ನಾಗರಿಕ ಶಕ್ತಿ

By Staff
|
Google Oneindia Kannada News

Capt Gopinath
ಬೆಂಗಳೂರು, ಮೇ. 11 : ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಅವರು ಚುನಾವಣಾ ಪ್ರಚಾರದ ವೇಳೆ ಹುಟ್ಟು ಹಾಕಿದ್ದ ನಾಗರಿಕ ವೇದಿಕೆಯನ್ನು ನಾಗರಿಕ ಶಕ್ತಿಯನ್ನಾಗಿ ಬದಲಾಯಿಸಲು ನಿರ್ಧರಿಸಿದ್ದಾರೆ. ಮತದಾನದ ನಂತರ ಕರೆಯಲಾಗಿದ್ದ ವೇದಿಕೆಯ ಪ್ರಥಮ ಸಭೆಯಲ್ಲಿ ವೇದಿಕೆಗೆ ನಾಗರಿಕ ಶಕ್ತಿ ಎಂದು ಹೆಸರಿಡಲಾಯಿತು.

ಹೆಬ್ಬಾಳ ಬಳಿಯ ಜೈನ್ ಹೆರಿಟೇಜ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವೈದ್ಯರು, ಶಿಕ್ಷಕರು, ಪೈಲೆಟ್ ಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಮಂದಿ ಪಾಲ್ಗೊಂಡಿದ್ದರು. ರಾಜಧಾನಿ ಸೇರಿದಂತೆ ನಾಡಿನ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನದ ಮೂಲಕ ಪರಿಹಾರೋಪಾಯಗಳನ್ನು ಕಂಡು ಹಿಡಿಯುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಪಕ್ಷಾತೀತ ಸಂಘಟನೆಯಾದ ನಾಗರಿಕ ವೇದಿಕೆ ವತಿಯಿಂದ ಯಾವುದೇ ಪ್ರತಿಭಟನೆ ನಡೆಸಬಾರದು. ಬದಲಿಗೆ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಪದೇಪದೇ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಿಕ್ಷಣ, ಸಾರ್ವಜನಿಕ ಸೇವೆ, ಆಡಳಿತದಲ್ಲಿ ದಕ್ಷತೆ, ರಾಷ್ಟ್ರದ ಏಕತೆ ಹಾಗೂ ಸಾರ್ವಜನಿಕ ನೀತಿ ಈ ಐದು ವಿಷಯಗಳ ಮೇಲೆ ಅಧ್ಯಯನ ತಂಡಗಳನ್ನು ರಚಿಸಲಾಯಿತು. ಇನ್ ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಟಿ ವಿ ಮೋಹನ್ ದಾಸ್ ಪೈ, ಉದ್ಯಮಿ ಅಭಯ ಜೈನ್, ಗೂಗಲ್ ರಿಸರ್ಚ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪ್ರಸಾದ್ ರಾಮ್ ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X