ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸಂಕಟಕ್ಕೆ ಸಿಲುಕಿದ ಬಳ್ಳಾರಿ ಗಣಿಧಣಿಗಳು!

By Staff
|
Google Oneindia Kannada News

Bellary Reddys to abide by SC order
ನವದೆಹಲಿ, ಮೇ.2: ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಆಗಿರುವ ರಾಜ್ಯದ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಜಂಟಿ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ಸಮೀಕ್ಷೆಯನ್ನು ಆರು ವಾರಗಳ ಒಳಗಾಗಿ ಮಾಡಿ ಮುಗಿಸುತ್ತೇವೆ ಎಂಬುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನ್ಯಾಯವಾದಿ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಜೆ.ಎಂ.ಪಾಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠ ಪರಿಗಣಿಸಿದೆ.

ಕೇಂದ್ರ ಸರಕಾರ ಈ ವಿಷಯದಲ್ಲಿ ಏ.22ರಂದು ಆದೇಶ ನೀಡಿ ಸಮೀಕ್ಷೆ ನಡೆಸಲು ಗಡಿಯಲ್ಲಿರುವ ಸಚಿವ ಜನಾರ್ದನರೆಡ್ಡಿ ಅವರಿಗೆ ಸೇರಿದ ಓಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ 5 ಗಣಿಗಳನ್ನು ಮುಚ್ಚಲು ಆದೇಶ ನೀಡಿತ್ತು. ಈ ಆದೇಶ ಜಾರಿ ಮಾಡಲು ಆಂಧ್ರ ಪ್ರದೇಶ ಸರಕಾರಕ್ಕೆ ಸೂಚಿಸಿತ್ತು.

ಆದರೆ ಸಚಿವ ಜನಾರ್ದನ ರೆಡ್ಡಿ ಅವರು ಗಣಿಗಾರಿಕೆ ಮುಂದುವರೆಸುವುದಾಗಿ ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದರು. ಇದೀಗ ಸುಪ್ರೀಂ ಕೋರ್ಟ್ ಆರು ವಾರಗಳಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸುವ ಮೂಲಕ ಕೇಂದ್ರ ಸರಕಾರದ ಆದೇಶ ಪಾಲಿಸುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ಸಚಿವ ರೆಡ್ಡಿ ಅವರು ತಮ್ಮ ಒಡೆತನದ ಗಣಿಯನ್ನು ಬಂದ್ ಮಾಡುವ ಅನಿವಾರ್ಯ ಪರಿಸ್ಥಿತಿ ತಲೆದೋರಿದ್ದು ಗಣಿಗಾರಿಕೆಯನ್ನು ಮುಂದುವರಿಸಿದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಧರ್ಮಸಂಕಟ ಉದ್ಭವಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಬಳ್ಳಾರಿ ರೆಡ್ಡಿ ಸಹೋದರರ ಗಣಿ ಗುತ್ತಿಗೆ ಅಮಾನತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X