ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ

By Staff
|
Google Oneindia Kannada News

Mahinda Rajapakse
ಕೊಲಂಬೊ, ಏ. 28 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿ ಸಿಕ್ಕಿಬಿದ್ದಲ್ಲಿ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ಸರಕಾರ ಸಿದ್ಧವಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಲಂಕಾ ಸರಕಾರ ಸಿದ್ಧವಿದೆ. ಅದಕ್ಕೂ ಮುಂಚೆ ಲಂಕಾದಲ್ಲಿ ಅವರ ಮೇಲಿರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ರಾಜಪಕ್ಷ್ಸೆ ತಿಳಿಸಿದರು. ಕೊಲಂಬೊ ಪ್ರೇಮದಾಸ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ಸೇರಿ ಅನೇಕ ಭಯೋತ್ಪಾದನಾ ಕೃತ್ಯಗಳನ್ನು ಪ್ರಭಾಕರನ್ ಎದುರಿಸುತ್ತಿದ್ದಾರೆ.

ಭಾರತ ಮಾಜಿ ಪ್ರಧಾನಿ ರಾಜೀವ ಗಾಂಧಿ ದೊಡ್ಡ ನಾಯಕರು. ಅಂತಹ ನಾಯಕರನ್ನು ಭಯಾನಕವಾಗಿ ಹತ್ಯೆ ಮಾಡಿರುವ ಆರೋಪ ಪ್ರಭಾಕರನ್ ಮೇಲಿದೆ. ಅವರ ವಿರುದ್ದ ಭಾರತದಲ್ಲಿಯೂ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಲಂಕಾದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯ ನಂತರ ಪ್ರಭಾಕರನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ರಾಜಪಕ್ಷ್ಸೆ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಎಲ್ ಟಿಟಿಇ 100 ಕೋ ರು ಸಹಾಯಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X