ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತನಲ್ಲಿ ಪ್ರಧಾನಿ ಮೇಲೆ ಬೂಟು

By Staff
|
Google Oneindia Kannada News

Youth hurls shoe at Manmohan Singh in Gujarat
ಅಹಮದಾಬಾದ್, ಏ. 27 : ಬೂಟು ಎಸೆಯುವ ಮೂಲಕ ವಿನೂತನ ಪ್ರತಿಭಟನೆಯ ಹಾವಳಿ ಮುಂದುವರೆದಿದ್ದು, ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರತ್ತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬೂಟು ಎಸೆದ ಘಟನೆ ಅಹಮದಾಬಾದ್ ನಲ್ಲಿ ಭಾನುವಾರ ನಡೆದಿದೆ.

21ರ ಹರೆಯದ ವಿದ್ಯಾರ್ಥಿ ಹಿತೇಶ್ ಚೌಹಾನ್ ಪ್ರಧಾನಿಯತ್ತ ಶೂಎಸೆದ ಭೂಪ. ಶೂ ಗುರಿ ತಪ್ಪಿದ್ದು, ಪ್ರಧಾನಿ ಭಾಷಣ ಮಾಡುತ್ತಿದ್ದ ವೇದಿಕೆಯ ಸ್ಥಳದಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದೆ. ಇದೇ ವೇಳೆ ಮನಮೋಹನ್ ಸಿಂಗ್ ಶೂ ಎಸೆದ ಯುವಕನ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ಸೂಚಿಸಿದ್ದು, ಯುವಕನ್ನು ಪ್ರಧಾನಮಂತ್ರಿ ಕ್ಷಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಪಲ್ದಿ ಪ್ರದೇಶದಲ್ಲಿನ ಸಂಸ್ಕಾರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣೆ ಪ್ರಚಾರಸಭೆಯಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಆಸನಗಳ ಪ್ರೆಸ್ ಗ್ಯಾಲರಿ ಬಳಿ ಕುಳಿತಿದ್ದ ಹಿತೇಶ್ ಚೌಹಾನ್ ಪ್ರಧಾನಿಯತ್ತ ಶೂ ಎಸೆದ. ತಕ್ಷವೇ ಪ್ರಧಾನಿಯವರ ವಿಶೇಷ ಭದ್ರತಾ ಪಡೆ ಸಿಬ್ಬಂದಿ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಹಿತೇಶ್ ಚೌಹಾನ್ ಅಹಮದಾಬಾದ್ ನಿವಾಸಿ ಎನ್ನಲಾಗಿದೆ. ಈತ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಕೇಂದ್ರ ಸರಕಾರ ವಿಫಲವಾಗಿದೆ ಎನ್ನುವುದು ಈತನ ಪ್ರತಿಭಟನೆಗೆ ಕಾರಣವಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರಧಾನಿ ಮೇಲೆ ಶೂ ಎಸೆತ ನಾಲ್ಕನೇ ಪ್ರಸಂಗವಾಗಿದೆ.

ಬಿಜೆಪಿ ಖಂಡನೆ
ಶೂ ಎಸೆದ ಯುವಕನ ಕೃತ್ಯ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ ತಿಳಿಸಿದ್ದಾರೆ. ಪ್ರಧಾನಿಯತ್ತ ಶೂ ಎಸೆದ ಪ್ರಕರಣಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

(ಏಜೆನ್ಸೀಸ್)

ಚಪ್ಪಲಿ ಎಸೆತ ಕುರಿತೊಂದು ಹಾಸ್ಯ ಲೇಖನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X