ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿದಲ್ಲಿರುವ ಕಪ್ಪು ಹಣ ಸ್ವದೇಶಕ್ಕೆ : ಅಡ್ವಾಣಿ

By Staff
|
Google Oneindia Kannada News

Will bring back slush funds in 100 days: Advani
ಮುಂಬೈ, ಏ. 17 : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 100 ದಿನದೊಳಗೆ ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತಕ್ಕೆ ಸೇರಿಬೇಕಿರುವ ಲಕ್ಷಾಂತರ ಕೋಟಿ ರುಪಾಯಿಗಳ ಕಪ್ಪುಹಣವನ್ನು ದೇಶಕ್ಕೆ ತರಲಾಗುವುದು. ಈ ಕುರಿತು ಶೀಘ್ರದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು ಎಂದು ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಹೇಳಿದರು.

ಭಾರತಕ್ಕೆ ಸೇರಬೇಕಿರುವ ಅಪಾರ ಪ್ರಮಾಣದ ಕಪ್ಪು ಹಣ ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯತೊಡಗಿದೆ. ಈ ಕುರಿತು ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ. ಇತ್ತೀಚೆಗೆ ನಡೆದ ಜಿ 20 ಶೃಂಗಸಭೆಯಲ್ಲೂ ಕೂಡಾ ಭಾರತ ಮೂಕ ಪ್ರೇಕ್ಷಕನಂತೆ ವರ್ತಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಕಪ್ಪು ಹಣ ತರಲು ಕಾಂಗ್ರೆಸ್ ಪಕ್ಷ ಏಕೆ ಮುಂದಾಗುತ್ತಿಲ್ಲ ಎಂದು ಅಡ್ವಾಣಿ ಸಿಡಿಮಿಡಿಗೊಂಡರು.

ಸ್ವಿಸ್ ಬ್ಯಾಂಕ್ ನಲ್ಲಿ ಭಾರತಕ್ಕೆ ಸೇರಿದ ಕನಿಷ್ಠ 25 ಲಕ್ಷ ಕೋಟಿ ರುಪಾಯಿಯಿಂದ 75 ಲಕ್ಷ ಕೋಟಿ ರುಪಾಯಿ ಇರುವ ಸಾಧ್ಯತೆ ಇದೆ. ಇದನ್ನು ಭಾರತೀಯ ಜನತಾ ಪಕ್ಷ ಅಂದಾಜು ಮಾಡಿದೆ ಎಂದು ಅಂಕಿ ಅಂಶ ಬಹಿರಂಗಪಡಿಸಿದ ಅಡ್ವಾಣಿ, ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಮರಳಿ ಭಾರತಕ್ಕೆ ಬರಬೇಕು. ಇದು ದೇಶದ ಪ್ರತಿ ನಾಗರಿಕನ ಅಗ್ರಹ. ವಿದೇಶಿ ಬ್ಯಾಂಕ್ ನಲ್ಲಿರುವ ಹಣ ಭಾರತಕ್ಕೆ ತರಬೇಕೋ ಬೇಡವೋ ಎಂಬ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಅಗತ್ಯ ಬಿದ್ದರೆ, ಗಣತಿಯೂ ಆಗಲಿ ಎಂದು ಅವರು ಒತ್ತಾಯಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X