ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಛಾಪಾ ಕಾಗದ ಹರಗಣ : ಶಿಕ್ಷೆ ಪ್ರಕಟ

By Staff
|
Google Oneindia Kannada News

Sangram Singh
ಬೆಂಗಳೂರು, ಏ. 17 : ನಕಲಿ ಛಾಪಾ ಕಾಗದ ಹಗರಣದಲ್ಲಿ ದೋಷಿಯಾಗಿದ್ದ ಅಪರಾಧಿಗಳಿಗೆ ಸಿಬಿಐ ಪ್ರಕರಣಗಳಿಗಾಗಿರುವ 35 ನೇ ಸಿಟಿ ಸಿವಿಲ್ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದೆ. ಮಾಜಿ ಎಸಿಪಿ ಸಂಗ್ರಾಮ್ ಸಿಂಗ್ ಅವರಿಗೆ 3 ವರ್ಷ ಕಠಿಣ ಜೈಲು ಸಜೆ ಹಾಗೂ 25 ಸಾವಿರ ರುಪಾಯಿ ದಂಡ ವಿಧಿಸಿದೆ. ಅಲ್ಲದೇ ಕರೀಂ ಲಾಲ್ ತೆಲಗಿ ಹಾಗೂ ಆತನ 7 ಮಂದಿ ಸಹಚರರಿಗೆ 7 ವರ್ಷ ಜೈಲು ಸಜೆ ಮತ್ತು 50 ಸಾವಿರ ದಂಡವನ್ನು ವಿಧಿಸಿದೆ.

ಈ ಸಂಬಂಧ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂಗ್ರಾಮ್ ಸಿಂಗ್ ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ ಆರು ತಿಂಗಳು ಜೈಲು ಸಜೆ ಹಾಗೂ ತೆಲಗಿ ಸೇರಿ 8 ಮಂದಿ ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಳೆದ ಮಂಗಳವಾರ ಮಾಜಿ ಎಸಿಪಿ ಸಂಗ್ರಾಮ್ ಸಿಂಗ್. ಕರೀಂ ಲಾಲ್ ತೆಲಗಿ ಹಾಗೂ ಆತನ 7 ಮಂದಿ ಸಹಚರರು ದೋಷಿಗಳೆಂದು ಸಾಬೀತಾಗಿತ್ತು. ಶಿಕ್ಷೆ ಪ್ರಮಾಣದ ಘೋಷಣೆಯನ್ನು ಶುಕ್ರವಾರಕ್ಕೆ ಕಾಯ್ದಿರಿಸಲಾಗಿತ್ತು.

ತೆಲಗಿ ಪರ ಎಂ ಟಿ ನಾಣಯ್ಯ, ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ ಈಗಾಗಲೇ ಮೊಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗಾಗಿ, ಒಂದೇ ಪ್ರಕರಣ ಸಂಬಂಧಿಸಿದಂತೆ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸುವ ಬದಲು ಮೊದಲ ತೀರ್ಪಿನ ಜೊತೆ ಅನ್ವಯಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ಛಾಪಾಕೂಪ : ಸಂಗ್ರಾಮ್ ಸೇರಿ 9 ಜನ ತಪ್ಪಿತಸ್ಥರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X