ಲಾಹೋರ್ ದಾಳಿಯಲ್ಲಿ ಭಾರತ ಕೈವಾಡ: ಪಾಕ್
ಲಾಹೋರ್, ಏ.10: ಪಾಕಿಸ್ತಾನ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ದಾಳಿಯಲ್ಲಿ ಭಾರತ ಕೈವಾಡ ಇದೆ ಎಂದು ಪಾಕ್ ಇಂದು ಗಂಭೀರವಾಗಿ ಆರೋಪಿಸಿತು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಈ ಆರೋಪಗಳನ್ನು ಮಾಡಿತು. ಮಾರ್ಚ್ 3ರಂದು ನಡೆದ ಲಾಹೋರ್ ದಾಳಿಗೆ ಸಂಬಂಧಿಸಿದಂತೆ ಪಾಕ್ ಪೊಲೀಸರಿಗೆ ಮಹತ್ವದ ದಾಖಲೆಗಳು ಸಿಕ್ಕಿವೆಯಂತೆ. ಸ್ಫೋಟಕ ಸಾಮಗ್ರಿಗಳು ಭಾರತದಿಂದಲೇ ಪಾಕ್ ಗೆ ಸರಬರಾಜಾಗಿವೆ ಎಂಬ ಮಾಹಿತಿಯೂ ನಮಗೆ ಲಭ್ಯವಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಪಾಕ್ ನ ಈ ಆರೋಪಗಳನ್ನು ಶ್ರೀಲಂಕಾದ ವಿದೇಶಾಂಗ ಸಚಿವ ರೋಹಿತ್ ಬೊಗೊಲ್ಲಗಾಮ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಲಾಹೋರ್ ನಲ್ಲಿ ಶ್ರೀಲಂಕ ಕ್ರಿಕೆಟ್ ತಂಡದ ಮೇಲೆ ನಡೆದ ದಾಳಿಯಲ್ಲಿ ಭಾರತ ಕೈವಾಡ ಇಲ್ಲ. ಭಯೋತ್ಪಾದನೆಯನ್ನು ತೊಡೆದುಹಾಕಲು ಭಾರತ ನಮಗೆ ಸಹಾಯ ಮಾಡುತ್ತಿದೆ.ಹೀಗಿದ್ದುಕೊಂಡು ಉಗ್ರವಾದಕ್ಕೆ ಭಾರತ ಹೇಗೆ ಕುಮ್ಮಕ್ಕು ನೀಡಲು ಸಾಧ್ಯ ಎಂದು ಅವರು ಪಾಕಿಸ್ತಾನವನ್ನು ಪ್ರಶ್ನಿಸಿದ್ದಾರೆ.
ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರು ದಾಳಿ ಮಾಡಿದಾಗ ಏಳು ಆಟಗಳು ಗಾಯಗೊಂಡು ಆರು ಮಂದಿ ಪಾಕಿಸ್ತಾನಿ ಪೊಲೀಸರು ಸಾವಪ್ಪಿದ್ದರು. ಈ ಘಟನೆಯಿಂದ ಪಾಕಿಸ್ತಾನ ಜಾಗತಿಕವಾಗಿ ತಲೆತಗ್ಗಿಸುವಂತಾಗಿತ್ತು.
(ಏಜೆನ್ಸೀಸ್)












Click it and Unblock the Notifications