ಇಂಡಿಯಾ ಟಿವಿ ಸಮೀಕ್ಷೆ, ಯುಪಿಎಗೆ ಹಿನ್ನೆಡೆ

ನವದೆಹಲಿ, ಏ. 6 : ದೇಶದಲ್ಲಿ ನಡೆಯುತ್ತಿರುವ ಮಹಾಸಮರಕ್ಕೆ ರಾಜಕೀಯ ತಜ್ಞರು, ನುರಿತ ಪತ್ರಕರ್ತರು ಸೇರಿ ಚುನಾವಣೆ ಪೂರ್ವಭಾವಿ ಸಮೀಕ್ಷೆಗಳನ್ನು ನಡೆಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಇಂಡಿಯಾ ಟಿವಿ ನಡೆಸಿದ ಪೂರ್ವಭಾವಿ ಸಮೀಕ್ಷೆ ಪ್ರಕಾರ, ಯುಪಿಎಗಿಂತ ಎನ್ ಡಿಎ ಒಂಬತ್ತು ಸ್ಥಾನಗಳನ್ನು ಹೆಚ್ಚು ಪಡೆಯಲಿದೆ ಎಂದು ಹೇಳಿದೆ.

187 ಸ್ಥಾನಗಳಲ್ಲಿ ಎನ್ ಡಿಎ ಗೆಲುವು ಸಾಧಿಸಿದರೆ, ಯುಪಿಎ 178 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಎನ್ ಡಿಎ ಗಿಂತ ಒಂಬತ್ತು ಸ್ಥಾನ ಹಿನ್ನೆಡೆ ಅನುಭವಿಸಲಿದೆ. ಯುಪಿಎ ತನ್ನ ಮಾಜಿ ಮಿತ್ರ ಪಕ್ಷಗಳಾದ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ ಹಾಗೂ ಲೋಕಜನ ಶಕ್ತಿ ಪಕ್ಷಗಳನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಲ್ಲಿ ಅದರ ಬಲಾಬಲ 235ಕ್ಕೆ ಏರಲಿದೆ.

144 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸುವ ಬಿಜೆಪಿ ಎನ್ ಡಿಎ ಮಿತ್ರ ಪಕ್ಷಗಳ ಸೇರಿಕೊಂಡರೆ ಅದರ ಸಂಖ್ಯೆ ಒಟ್ಟು 187 ಆಗಲಿದೆ. ಅದರ ಅಂದಾಜು 121 ಸ್ಥಾನ ಗಳಿಸಲಿರುವ ತೃತೀಯ ರಂಗದ ಕೈಯಲ್ಲಿಯೇ ಸರ್ಕಾರದ ಕೀಲಿಕೈ ಇರುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಸರ್ಕಾರ ರಚನೆ ಮಾಡಲು 272 ಸಂಸದರ ಅಗತ್ಯವಿದೆ. 235 ಸ್ಥಾನ ಗೆಲ್ಲಲಿರುವ ಯುಪಿಎಗೆ ಇನ್ನೂ 37 ಸ್ಥಾನಗಳ ಕೊರತೆ ಬೀಳಲಿದೆ. ದೇಶದ ಉದ್ದಗಲಕ್ಕೂ ಸಂಚರಿಸಿ ಸುಮಾರು 50 ಸಾವಿರ ಮತದಾರರ ಸಂದರ್ಶನ ನಡೆಸಿ ಈ ಸಮೀಕ್ಷೆ ಬಿಡುಗಡೆ ಮಾಡಲಾಗಿದೆ ಎಂದು ಇಂಡಿಯಾ ಟಿವಿ ತಿಳಿಸಿದೆ.

(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+