ತುಮಕೂರಲ್ಲಿ ಸ್ವಾಮೀಜಿಗೆ ಜೆಡಿಎಸ್ ಸಾಥ್
ತುಮಕೂರು ಎ 4: ರಾಜಕೀಯ ತಂತ್ರಗಾರಿಕೆ ಹೆಸರಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬಿಜೆಪಿ ವಿರುದ್ದ ಇನ್ನೊಂದು ದಾಳ ಹಾಕಲು ತಯಾರಿ ನಡೆಸಿದ್ದಾರೆ, ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿದ್ದ ಗೌರಿಶಂಕರ್ ಸ್ವಾಮೀಜಿಯವರು ಲೋಕಸಭಾ ಚುನಾವಣಾ ಕಣಕ್ಕೆ ಧುಮಕಲಿದ್ದಾರೆ. ಇಂದು ಪಕ್ಷೇತರ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದು, ಸ್ವಾಮೀಜಿಯವರ ಈ ಅಚ್ಚರಿಯ ನಿರ್ಧಾರದ ಹಿಂದೆ ದೇವೇಗೌಡ ಅವರ ಕೈವಾಡವಿದೆ ಎಂದು ಹೇಳಲಾಗಿದೆ.
ಲಿಂಗಾಯತರ ಮತಗಳನ್ನು ವಿಭಜಿಸಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರನ್ನು ಸೋಲಿಸುವುದು ಗೌಡರ ಈ ನಡೆಯ ಹಿಂದಿನ ಏಕೈಕ ಉದ್ದೇಶ, ಯಾರಿಗೂ ಸುಳಿವು ನೀಡದೇ ಶ್ರೀಗಳು ಏಕಾಏಕಿ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದೆ ಗೌಡರ ರಾಜಕೀಯ ಚಾಣಕ್ಷತನ ಕೆಲಸ ಮಾಡಿದೆ. ಆದರೆ ಸ್ವಾಮೀಜಿಯವರು ದೇವೇಗೌಡರ ಬೆಂಬಲ ಮತ್ತು ಆರೋಪವನ್ನು ಅಲ್ಲಗಳೆದು, ಧಾರ್ಮಿಕ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಇರಾದೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.
ಈ ನಡುವೆ ಸ್ವಾಮೀಜಿಯವರ ಸ್ಪರ್ಧೆಯ ನಿರ್ಧಾರದಿಂದ ಅವರ ಭಕ್ತರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದಲಿ೦ಗೇಶ್ವರರನ್ನು ನಿಮ್ಮಲ್ಲಿ ಕಾಣುತ್ತಿದ್ದೇವೆ, ತಾವು ರಾಜಕೀಯಕ್ಕೆ ಇಳಿಯಬಾರದು ಎಂದು ಭಕ್ತರು ರೋದಿಸಿದರೂ ಸ್ವಾಮೀಜಿ ತಮ್ಮ ನಿರ್ಧಾರ ಬದಲಿಸದಿದ್ದಾಗ ಸ್ವಾಮೀಜಿಯವರನ್ನು ಬಹಿಷ್ಕರಿಸುವ ನಿರ್ಧಾರ ಭಕ್ತರು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಬಳ್ಳಾರಿ: ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲ್ಲ, ಕುಮಾರಣ್ಣ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications