ಬಿಎಸ್ಎನ್ಎಲ್ ಸ್ಥಳೀಯ ಕರೆ ದರ ಕಡಿತ
ನವದೆಹಲಿ. ಫೆ. 27 : ಭಾರತ್ ಸಂಚಾರ ನಿಗಮ ನಿಯಮಿತವು (ಬಿಎಸ್ಎನ್ಎಲ್) ಮಾರ್ಚ್ 1 ರಿಂದ ಸ್ಥಿರ ಮತ್ತು ವಿಲ್ ದೂರವಾಣಿಗಳಿಂದ ಮಾಡುವ ಸ್ಥಳೀಯ ಕರೆ ದರವನ್ನು ನಿಮಿಷಕ್ಕೆ 33 ಪೈಸೆಗೆ ಹಾಗೂ ಎಸ್ ಟಿಡಿ ದರವನ್ನು ನಿಮಿಷಕ್ಕೆ 50 ಪೈಸೆಗೆ ಇಳಿಸಲಾಗಿದೆ.
ಬಿಎಸ್ಎನ್ಎಲ್ ಇಂಡಿಯಾ ಗೋಲ್ಡನ್ 50 ಹೆಸರಿನ ಪ್ರಿ ಪೇಯ್ಡ್ ಮೊಬೈಲ್ ಸೇವೆಯನ್ನು ಆರಂಭಿಸಲಿದೆ. ಈ ಯೋಜನೆಯಲ್ಲಿ ಎಸ್ ಟಿಡಿ ದರ ನಿಮಿಷಕ್ಕೆ 50 ಪೈಸೆ ಆಗಿರುತ್ತದೆ. ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಸ್ಥಳಾಂತರಗೊಂಡರೂ ನಂಬರ್ ಮಾತ್ರ ಬದಲಾಗದೆ ಇರುವ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೇವಾ ಪರವಾನಗಿ ಪಡೆಯುವ ಯಶಸ್ವಿ ಬಾಜಿದಾರರ ಹೆಸರನ್ನು ಮಾರ್ಚ್ 5 ರಂದು ಪ್ರಕಟಿಸಲಾಗುವುದು ಸಂಪರ್ಕ ಖಾತೆಯ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಗುರುವಾರ ಸಂಸತ್ತಿಗೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications