ಮೋದಿ ಗಯಾ ತೋ ಗುಜರಾತ ಗಯಾ, ಬಾಳಾ ಠಾಕ್ರೆ
ಮುಂಬೈ, ಫೆ. 26 : ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿದವನು ನಾನೇ, ಗೋಧ್ರಾ ಗಲಭೆ ನಂತರ ಬಿಜೆಪಿ ಮುಖಂಡ ಹಾಗೂ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರು ಮೋದಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ನಿರ್ಧರಿಸಿದ್ದರು ಎಂದು ಹೇಳುವ ಮೂಲಕ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಬಿಜೆಪಿ ವಲಯದ ಮೇಲೆ ಪಟಾಕಿ ಸಿಡಿಸಿದ್ದಾರೆ.
ಗೋಧ್ರಾ ಹತ್ಯಾಕಾಂಡ ನಡೆದ ನಂತರ ದೇಶಾದ್ಯಂತ ಭಾರತೀಯ ಜನತಾ ಪಕ್ಷದ ಮುಖಂಡರು ಮೇಲೆ ಮೋದಿ ವಿರೋಧಿಸಿ ಭಾರಿ ಒತ್ತಡ ಬಂದಿತ್ತು. ದೇಶದೆಲ್ಲೆಡೆ ಗುಜರಾತ ಮುಖ್ಯಮಂತ್ರಿ ನರೆಂದ್ರ ಮೋದಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸುವಂತೆ ಪ್ರತಿಭಟನೆಗಳು, ಒತ್ತಾಯಗಳು ದಂಡಿದಂಡಿಯಾಗಿ ಕೇಳು ಬರತೊಡಗಿದವು. ಆ ಸಂದರ್ಭದಲ್ಲಿ ಪರಿಸ್ಥಿತಿ ಎದುರಿಸಲಾಗದ ಬಿಜೆಪಿ ಮುಖಂಡರು ಮೋದಿ ಪದಚ್ಯುತಿಗೆ ನಿರ್ಧರಿಸಿದ್ದರು. ಆಗ ನಾನು, ಬಿಜೆಪಿ ಮುಖಂಡರಿಗೆ ಯಾವ ಕಾರಣಕ್ಕೂ ಮೋದಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸುವುದು ಬೇಡ. ಹಾಗೇನಾದರೂ ಮಾಡಿದಲ್ಲಿ ತಪ್ಪು ಸಂದೇಶ ರವಾನಿಸದಂತಾಗುತ್ತದೆ. ಒಂದು ವೇಳೆ ಮೋದಿಯನ್ನು ಕೆಳಗಿಳಿಸಿದರೆ, ಗುಜರಾತ ಬಿಜೆಪಿ ಕೈಯಿಂದ ಶಾಶ್ವತವಾಗಿ ಕಣ್ಮರೆಯಾಗಲಿದೆ (ಮೋದಿ ಗಯಾ ತೋ ಗುಜರಾತ ಗಯಾ) ಎಂದು ಎಚ್ಚರಿಕೆ ನೀಡಿದ್ದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಅವರು ಬರೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications