8 ಆಸ್ಕರ್ ಪ್ರಶಸ್ತಿ ಯಪಿಎ ಸರಕಾರದ ಸಾಧನೆ, ಕಾಂಗ್ರೆಸ್

abhishek sanghvi
ನವದೆಹಲಿ, ಫೆ. 24 : ಪ್ರಶಸ್ತಿ ಗೆಲ್ಲಲು ಉತ್ತಮ ಕತೆ, ಚಿತ್ರಕತೆ, ಸಂಗೀತ, ನಿರ್ದೇಶನ ಮಾತ್ರ ಇದ್ದರೆ ಸಾಕೇ ಕೇಂದ್ರದಲ್ಲಿ ಉತ್ತಮ ಸರ್ಕಾರವೂ ಬೇಕು ? ಸೋಮವಾರ ಸ್ಲಂಡಾಗ್ ಮಿಲೇನಿಯರ್ ಚಿತ್ರ ಎಂಟು ಆಸ್ಕರ್ ಪ್ರಶಸ್ತಿ ಗಳಿಸಿದ್ದನ್ನು ಕಾಂಗ್ರೆಸ್ ತನ್ನ ಪಕ್ಷದ ಸಾಧನೆ ಎಂದು ಬಿಂಬಿಸತೊಡಗಿದೆ.

ಕಳೆದ ಎನ್ ಡಿ ಎ ಸರಕಾರ ಲೋಕಸಭಾ ಚುನಾವಣೆಯ ಸಮಯದಲ್ಲಿ 'ಭಾರತ ಪ್ರಕಾಶಿಸುತ್ತಿದೆ' ಎಂದು ಘೋಷಿಸಿದ್ದರೆ ಈಗ ಕಾಂಗ್ರೆಸ್ 'ಗುರಿ ಸಾಧಿಸುವತ್ತ ಭಾರತ' ಎಂದು ಘೋಷಿಸಲು ಸಿದ್ದತೆ ಮಾಡಿಕೊಂಡಿದೆ. ಭಾರತ ಅಮೇರಿಕಾ ಪರಮಾಣು ಒಪ್ಪಂದ, ಚಂದ್ರಯಾನ, ಒಟ್ಟಾರೆ ಶೇ 9 ಪ್ರತಿಶತದಷ್ಟು ದೇಶದ ಅಭಿವೃದ್ದಿ ಮತ್ತು 8 ಆಸ್ಕರ್ ಪ್ರಶಸ್ತಿಯನ್ನು ಕಾಂಗ್ರೆಸ್ ತನ್ನ ಸಾಧನೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಾಂಘ್ವಿ ಹೇಳಿದ್ದಾರೆ.

ಸ್ಲಮ್ ಡಾಗ್ ತಂಡ ಉತ್ತಮ ಸಾಧನೆ ಮಾಡಿ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರೆ, ಸಾ೦ಘ್ವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಚಿತ್ರ ಭಾರತೀಯರು ಭಾರತಕ್ಕಾಗಿ ನಿರ್ಮಿಸಿದ ಚಿತ್ರ, ಉತ್ತಮ ವಾತಾವರಣ ಮತ್ತು ಉತ್ತಮ ಆಡಳಿತ ಇರುವ ಸರಕಾರ ಇದ್ದರೆ ಇಂತಹ ಸಾಧನೆ ಮಾಡಲು ಸಾಧ್ಯ ಎಂದು ಸ್ಲಮ್ ಡಾಗ್ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಚಿತ್ರದ ಮೂಲಕ ಭಾರತದ ಬಡತನವನ್ನು ಜಗತ್ತು ನೋಡುವಂತಾಯಿತು ಎನ್ನುವ ಟೀಕೆಗೆ, ವಿಶ್ವದಲ್ಲಿನ ಅರ್ಧದಷ್ಟು ದೇಶದಲ್ಲಿ ಬಡತನ ಕಾಡುತ್ತಿದೆ, ಭಾರತಕ್ಕಿಂತಲೂ ಕಡು ಬಡ ದೇಶಗಳು ಬೇಕಾದಷ್ಟಿವೆ ಎಂದು ಹೇಳಿದರು.

ಈ ಎಲ್ಲ ಯುಪಿಎ ಸರ್ಕಾರದ ಸಾಧನೆಯಾದರೆ, ಭಾರತದ ಐತಿಹಾಸಿಕ ಕರಾಳ ದಿನ ಎನ್ನಲಾದ ಮುಂಬೈ ಭಯೋತ್ಪಾದನೆ, ಬೆಂಗಳೂರು, ಅಹಮದಾಬಾದ್, ನವದೆಹಲಿ, ಮಾಲೇಗಾಂವ್, ಪುಣೆ, ಸೂರತ್, ಹೈದರಾಬಾದ್, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್ ನಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಇದರಿಂದ 500 ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ. ಇದು ಯುಪಿಎ ಸರ್ಕಾರದ ತಪ್ಪು ಅಂತ ಕಾಂಗ್ರೆಸ್ ಪಕ್ಷ ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಶ್ನಿಸುವ ಸಾಧ್ಯತೆ ಇದೆ.

(ದಟ್ಸ್ ಕನ್ನಡ ವಾರ್ತೆ)
ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ 8 ಆಸ್ಕರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+