111443mysoreಹದಿನೆಂಟೂ ಸಮಸ್ತರ ಅರಕಲಗೂಡು ದಸರಾ/festivals/dasara/2008/1007-arakalgud-dasara-communal-harmony.htmlಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿರುವ ಈ ನವರಾತ್ರಿ ಉತ್ಸವ ಅರಕಲಗೂಡಿನ ಹೆಮ್ಮೆ. 18 ಕೋಮಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಅರಕಲಗೂಡು ದಸರಾ ರಾಜ್ಯದಲ್ಲೇ ವಿನೂತನ,ವಿಶಿಷ್ಠ ಮತ್ತು ಅನುಕರಣೀಯ. 442http://kannada.oneindia.com/img/2009/09/17-arakalgud-dasara1.jpg111443mysoreಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg111443mysoreನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg111443mysoreಸಡಗರದ ದ್ಯೋತಕ ಈ ದಸರಾ/festivals/dasara/stories/2006/260906bhalle.htmlವಿಜಯದಶಮಿ ಬಂತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ದಸರಾ ಮೆರವಣಿಗೆ, ಸರಸ್ವತಿ ಪೂಜೆ, ಆಯುಧಪೂಜೆ, ಬೊಂಬೆ ಹಬ್ಬ ಸೇರಿದಂತೆ ವಿವಿಧ ಆಚರಣೆಗಳು ನೀಡುವ ಖುಷಿಯನ್ನು ಮರೆಯುವುದಾದರೂ ಹೇಗೆ?ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರಾ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ, ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ 6633http://kannada.oneindia.com/img/2009/09/17-srinath-bhalle3.jpg111443mysoreವಿಶ್ವೇಶ್ವರಯ್ಯ: ಮೇರು ವಾಸ್ತುಶಿಲ್ಪಿ , ಶಿಸ್ತಿನ ಸಿಪಾಯಿ/literature/people/2003/150903sirmv.htmlಅದು ವಿಶ್ವೇಶ್ವರಯ್ಯನವರ ಆಪ್ತೇಷ್ಟರು, ಬಂಧುಗಳೆಲ್ಲ ಸೇರಿದ್ದ ಸಣ್ಣ ಸಂತೋಷ ಕೂಟ. ವಿಶ್ವೇಶ್ವರಯ್ಯ ಅವರಿಗೆ ದಿವಾನ್‌ ಪದವಿ ಸಿಕ್ಕಿತ್ತು. ಆ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಮೊದಲು ತಮ್ಮ ಬಂಧು ಬಳಗವನ್ನೆಲ್ಲ ಕರೆದು ಸಣ್ಣ ಭೋಜನ ಕೂಟವೇರ್ಪಡಿಸಿದ್ದರು. ಆ ಕೂಟ ದಿವಾನರಾದ ಖುಷಿಯನ್ನು ಹಂಚಿಕೊಳ್ಳುವುದಕ್ಕಲ್ಲ ; ಕರ್ತವ್ಯದ ಜವಾಬ್ದಾರಿ ಭಾರವನ್ನು ಬಂಧುಗಳಿಗೆ ಮನದಟ್ಟು ಮಾಡಿಸುವುದಕ್ಕಾಗಿ. ದಿವಾನ ಪದವಿಯಲ್ಲಿರುವ ತಮ್ಮನ್ನು ಯಾವುದೇ ಶಿಫಾರಸುಗಳಿಗೆ 8959http://kannada.oneindia.com/img/2009/09/15-sirmv1.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpgnews"> ಮೈಸೂರಿನಲ್ಲಿ ಭಾರತೀಯ ಸಂಗೀತ ಉತ್ಸವ | Events: National Music festival, Mysore - ಮೈಸೂರಿನಲ್ಲಿ ಭಾರತೀಯ ಸಂಗೀತ ಉತ್ಸವ - Kannada Oneindia

ಮೈಸೂರಿನಲ್ಲಿ ಭಾರತೀಯ ಸಂಗೀತ ಉತ್ಸವ

Ganapati Sacchidananda Swamiji, Mysuru
ಮೈಸೂರು, ಫೆ. 13 : ಸಂಸ್ಕಾರ ಭಾರತಿಯು ಲಲಿತ ಕಲೆಗಳ ಕ್ಷೇತ್ರದಲ್ಲಿ ಇಂದು ರಾಷ್ಟ್ರಾದ್ಯಂತ ಪರಿಚಿತವಾದ ಆಖಿಲ ಭಾರತೀಯ ಸಾಸ್ಕೃತಿಕ ಸಂಘಟನೆ. ದೇಶಾದ್ಯಂತ 1500ಕ್ಕೂ ಹೆಚ್ಚು ಶಾಖೆಗಳಿಂದ ನಗರ, ಗ್ರಾಮ ಹಾಗೂ ವನವಾಸಿ ಸಮುದಾಯಗಳವರೆಗೆ ತನ್ನ ಸಂಪರ್ಕ-ಪ್ರಭಾವ ಬೆಳೆಸಿಕೊಂಡಿದೆ. ಭರತ ಮುನಿಯಿಂದ ಪ್ರಣೀತವಾದ ಎಲ್ಲಾ ಕಲಾಪ್ರಕಾರಗಳ ಸಂರಕ್ಷಣೆ, ಸಂವರ್ಧನಗೊಳಿಸಿ ಸಮಾಜದಲ್ಲಿ ಏಕಾತ್ಮತೆಯ ಭಾವಬಂಧನ ಬೆಸೆಯುವ ಸಾರ್ಥಕ ಪ್ರಯತ್ನ ಸಂಸ್ಕಾರ ಭಾರತಿಯದು.

ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಸಂಸ್ಕಾರ ಭಾರತಿ ಮೈಸೂರು ನಗರದಲ್ಲಿ 2009ನೇ ಫೆಬ್ರವರಿ 19ರಿಂದ 22 ರವರೆಗೆ ರಾಷ್ಟ್ರೀಯ ಸಂಗೀತ ಉತ್ಸವ ಏರ್ಪಾಡಾಗಿದೆ. ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತ ಪ್ರಾಕಾರಗಳ ಹಿರಿಯ ಹಾಗೂ ಕಿರಿಯ ಸಂಗೀತ ವಿದ್ವಾಂಸರು, ಸಾಧಕರು, ವಿಮರ್ಷಕರು, ಹಾಗೂ ಉದಯೋನ್ಮುಖ ವಿದ್ಯಾರ್ಥಿಗಳು ಭಾಗವಹಿಸುವ ಈ ಕಲಾಸಾಧಕ ಸಂಗಮ ಸಂಗೀತ ಉತ್ಸವ ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಹಾಗು ಪಾರಂಪರಿಕ ನಗರವೆಂದು ಪ್ರಸಿದ್ದವಾದ ನಮ್ಮ ಮೈಸೂರಿನಲ್ಲಿ ಏರ್ಪಟ್ಟಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.

ಈ ರಾಷ್ಟ್ರೀಯ ಸಂಗಿತೋತ್ಸವದಲ್ಲಿ ಹಿರಿಯ ಸಂಗೀತ ಗುರುಗಳಿಗೆ, ಸಾಧಕರಿಗೆ, ಪೋಷಕರಿಗೆ ಮತ್ತು ಹಿರಿಯ ವಾದ್ಯಗಳ ತಯಾರಕರಿಗೆ ಸನ್ಮಾನ, ದೇಶದ ಮಹಾನ್ ಸಂಗಿತ ವಿದ್ವಾಂಸರಿಂದ ಮೂರೂದಿವಸ ಸಂಜೆ ಪ್ರಧಾನ ಸಂಗೀತ ಕಛೇರಿ, ಗುರು ಶಿಷ್ಯ ಸಂವಾದ, ಸಂಗೀತವೇ ಕೇಂದ್ರವಾಗಿರುವ ವಿಷಯಗಳ ಮೇಲೆ ಉಪನ್ಯಾಸಗಳು, ವಿಶೇಷವಾಗಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಂದ ನಾದ ಸುಧೆ ಹಾಗೂ ಎಲ್ಲಾ ಸಂಗೀತ ವಿದ್ವಾಂಸರು ಮತ್ತು ಸಂಗೀತ ವಿದ್ಯಾರ್ಥಿಗಳಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಅಲ್ಲದೆ ವಿಶೇಷವಾಗಿ ಸಂಗೀತ ಯಜ್ಞ ಈ ಎಲ್ಲಾ ಕಾರ್ಯಕ್ರಮಗಳು ಈ ನಾಲ್ಕು ದಿವಸಗಳಲ್ಲಿ ಪ್ರಸ್ತುತಗೊಳ್ಳಲು ತಯಾರಿ ನಡೆದಿದೆ.

ಕಾರ್ಯಕ್ರಮದ ಸಂಪೂರ್ಣ ವಿವರ ಇಂತಿದೆ:

ಉದ್ಘಾಟನೆ : ದಿನಾಂಕ 19.02.09 ಸಂಜೆ 5 ಘಂಟೆಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ದತ್ತ ವಿಜಯಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಪದ್ಮವಿಭೂಷಣ ಡಾ.ಎಂ ಬಾಲಮುರಳಿ ಕೃಷ್ಣರವರು ಉದ್ಘಾಟಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡ್ಯೂರಪ್ಪನವರು ಮತ್ತು ರಾಷ್ಟೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾದ ಮೋಹನಜೀ ಭಾಗವತ್ ರವರು ಸಮಾರಂಭದ ಮುಖ್ಯ ಅತಿಥಿಗಳಾಗಿರುತ್ತಾರೆ. ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಕುಂಬ್ಳೆ ಸುಂದರ ರಾಯರು ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸುತ್ತಾರೆ.

ಸನ್ಮಾನ : ಈ ಮಹನೀಯರುಗಳ ಸಮ್ಮುಖದಲ್ಲಿ ಭಾರತೀಯ ಸಂಗೀತದ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಕೊಡುಗೆ ನೀಡುತ್ತಿರುವ ಸಾಧಕರನ್ನು ಸನ್ಮಾನಿಸುವ ಸಾರ್ಥಕ ಕಾರ್ಯ ಸಮಾರಂಭದ ಬಹಳ ಮುಖ್ಯ ಅಂಗವಾಗಿರುವುದು.

ಪ್ರಧಾನ ಪ್ರಸ್ತುತಿ : ಸಂಜೆ 7.30ಕ್ಕೆ ಉದ್ಘಾಟನಾ ಸಭಾಕಲಾಪದ ನಂತರ ಹಿಂದೂಸ್ಥಾನಿ ಸಂಗೀತದ ಪ್ರಸಿದ್ಧ ವೇಣು ವಾದಕರಾದ ರೋಣು ಮಜುಂದಾರ್ ರವರರಿಂದ ಬಾನ್ಸುರಿ ವಾದನದ ಜತೆಗೆ ಕರ್ನಾಟಕ ಸಂಗೀತದ ಮೈಸೂರಿನ ವಿದ್ವಾಂಸರುಗಳಾದ ಮೈಸೂರು ಎಂ.ನಾಗರಾಜ್ ಮತ್ತು ಡಾ. ಮೈಸೂರು ಎಂ ಮಂಜುನಾಥ್ ರವರ ಪಿಟೀಲು ನಾದ ಸುಧೆಯ ಜುಗಲಬಂದೀ ಆ ದಿನದ ಪ್ರಮುಖ ಸಂಗೀತ ಕಾರ್ಯಕ್ರಮವಾಗಿರುತ್ತದೆ.

ನಾದ ಸುಧೆ :
ದಿನಾಂಕ 20ರಂದು ಬೆಳಗ್ಗೆ ಡಾ. ಬಾಲಮುರಳಿ ಕೃಷ್ಣರವರಿಂದ ಸಂಗೀತ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ, ನಂತರ 9 ಘಂಟೆಯಿಂದ ಮೈಸೂರಿನ ವಿದುಷಿ ರಾಜಲಕ್ಷ್ಮಿಯವರಿಂದ ವೀಣೆ, ಪುಣೆಯ ಪಂ ಉದಯ ಭವಾಲ್ಕರ್, ಜೈಪುರದ ಡಾ ಮದುಭಟ್ ತೆಯಲಂಗ್ ರವರ ಹಿಂದೂಸ್ಥಾನಿ ದ್ರುಪದ್ ಗಾಯನ ಹಾಗೂ ಮೈಸೂರಿನ ಡಾ ಆರ್ ಎನ್ ಶ್ರೀಲತರವರಿಂದ ಕರ್ನಾಟಕ ಸಂಗೀತ ಕಾರ್ಯಕವರಮಗಳು. ಭೋಜನ ವಿರಾಮದ ನಂತರ ಪರಿಚರ್ಚೆ, ನಂತರ ನಾಗಪುರದ ಡಾ ಕಮಲಾಬೋಂಡೆ ಯವರ ಹಿಂದೂಸ್ಥಾನಿ ಗಾಯನ, ಕೇರಳದ ಶೇರ್‍ತಲೈ ರಂಗನಾಥ ಶರ್ಮರವರಿಂದ ಕರ್ನಾಟಕ ಸಂಗೀತ, ಪದ್ಮವಿಭೂಷಣ ಡಾ. ಎನ್ ರಮಣಿಯವರ ವೇಣುವಾದನ ಹಾಗೂ ದಿನದ ಅಂತ್ಯದಲ್ಲಿ ಪ್ರಸಿದ್ದ ದ್ರುಪದ್ ಗಾಯಕರಾದ ಪುಣೆಯ ಉಸ್ತಾದ್ ಸಯೀದುದ್ದೀನ್ ಡಾಗರ್ ರವರಿಂದ ದ್ರುಪದ್ ಗಾಯನ ಏರ್ಪಟ್ಟಿದೆ.

ದಿನಾಂಕ 21 ರಂದು ಬೆಳಗ್ಗೆ 7ಕ್ಕೇ ಸಂಗೀತ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ, ನಂತರ ಕರ್ನಾಟಕ ಕಲಾಶ್ರೀ ಡಾ ಆರ್.ಕೆ.ಶ್ರೀಕಂಠನ್ ಮತ್ತು ವಿದ್ವಾನ್ ಆರ್ ಎಸ್ ರಮಾಕಾಂತರವರ ಕನಾಟಕ ಸಂಗೀತ, ಮಂಜರಿ ಅಲೆಗಾಂಕರ್ ಪುಣೆ ಹಿಂದೂಸ್ಥಾನಿ ಗಾಯನ, ಪಂಡಿತ ಶ್ರಿ ದತ್ತ , ನವದೆಹಲಿ ಅವರ ಹಿಂದೂಸ್ಥಾನಿ ಗಾಯನ, ವಿದ್ವಾನ್ ಎಸ್ ಶಂಕರ್ ಬೆಂಗಳೂರು ಅವರ ಕಾರ್ನಾಟಕ ಸಂಗೀತ, ಜರುಗಲಿದೆ. ಭೋಜನದ ನಂತರ, ಅಸ್ಸಾಮಿನ ಪಂ ಭವೇಶ ಕಲಿತೆ, ಭುವನೇಶ್ವರದ ಪಂಡಿತ್ ದೇವೇಂದ್ರ ಸತ್ಪತಿ ಹಾಗೂ ಗ್ವಾಲಿಯರ್‌ನ ಪಂಡಿತ್ ಸಾಧನಾಮೋಹಿತೆ ಇವರುಗಳ ಹಿಂದೂಸ್ಥಾನಿ ಗಾಯನ ಏರ್ಪಟ್ಸಿದೆ. ಸಂಜೆ 5.30 ಕ್ಕೆ ಕನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ನರಸಿಂಹಲು ವಡಿವಾಟಿ, ಕನಾಟಕ ಸರಕಾರಕ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಆರ್. ಜಯರಾಮ ರಾಜೆ ಅರಸ್, ಹಾಗೂ ಆಯುಕ್ತರಾದ ಮನು ಬಳಿಗಾರ್ ರವರ ಉಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ನಂತರ ಚೆನ್ನೈನ ವಿದ್ವಾನ್ ಓ.ಎಸ್. ತ್ಯಾಗರಾಜನ್, ರವರ ಕರ್ನಾಟಕ ಸಂಗೀತ ಹಾಗೂ ವಾರಣಾಸಿ ಪಂಡಿತ ಶ್ರಿ ಚಿತ್ತರಂಜನ ಜ್ಯೋತಿಷಿ ಅವರ ಹಿಂದೂಸ್ಥಾನಿ ಗಾಯನದ ಪ್ರಸ್ಥುತಿ ನಾದ ಮಂಟಪದಲ್ಲಿ ಹರಿಯಲಿದೆ.

ಸಂಗೀತ ಯಜ್ಞ :
ಕಡೆಯ ದಿನ 22ರಂದು ಬೆಳಗ್ಗೆ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತವರ ತಂಡದಿಂದ ಸಂಗೀತ ಯಜ್ಞ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಗಳವರಿಂದ ನಾದ ಸುಧೆ ಹಾಗೂ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಮತ್ತವರ ಶಿಷ್ಯರು ಪೂಜ್ಯ ಶ್ರೀ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆಸಿಕೊಡುವ ಸಂಗೀತ ಬ್ರಹ್ಮ ಶ್ರೀ ತ್ಯಾಗರಾಜರ ಪಂಚರತ್ನಕೃತಿಗಳ ಬೃಹತ್ ಗೋಷ್ಠಿಗಾಯನ ಹಾಗೂ ಸಂಸ್ಕಾರ ಭಾರತಿಯ ರಾಷ್ಟೀಯ ಆಧ್ಯಕ್ಷರಾದ ರಾಜದತ್ತ ರವರ ಅಧ್ಯಕತೆಯಲ್ಲಿ ಸಂಗಿತೋತ್ಸವದ ಸಮಾರೋಪ ಕಾರ್ಯಕ್ರಮ.

ಸ್ಮರಣ ಸಂಚಿಕೆ : ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಪುರಸ್ಕೃತರಾದ ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಅವರ ಸಂಪಾದಕತ್ವದಲ್ಲಿ ತ್ರಿಭಾಷೆಗಳ ಲೇಖನಗಳನ್ನು ಹೊಂದಿರುವ ಸ್ಮರಣ ಸಂಚಿಕೆ ಈ ಉತ್ಸವದ ವೈಶಿಷ್ಟ್ಯ.

ಭಾಗವಹಿಸುವಿಕೆ : ಈ ಉತ್ಸವದಲ್ಲಿ ಸಂಗೀತ ವಿದ್ಯಾರ್ಥಿಗಳು, ಸಂಗೀತಗಾರರು, ಸಂಗೀತಾಭಿಮಾನಿಗಳು ಪ್ರತಿನಿಧಿಗಳಾಗಿ ಭಾಗಹಿಸಬಹುದು. ಪ್ರತಿನಿಧಿಗಳಿಗೆ ಸಂಸ್ಕಾರ ಭಾರತಿಯ ವತಿಯಿಂದ ಕಾರ್ಯಕ್ರಮದ ನಾಲ್ಕೂ ದಿನಗಳು ಉಟ, ಉಪಹಾರ, ಹೊರ ಊರುಗಳಿಂದ ಬರುವವರಿಗೆ ವಸತಿಯ ವ್ಯವಸ್ಥೆ ಮಾಡಲಾಗಿದೆ. ಈ ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮಂಗಳೂರು ಗಣೇಶ ಬೀಡಿ ಸಂಸ್ಥೆಯ ಮಾಲೀಕರಾದ ಜಗನ್ನಾಥ ಶೆಣೈ, ಕಾರ್ಯಾಧ್ಯಕ್ಷರಾಗಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳೂ, ಶಾಸಕರೂ ಆದ ಎಸ್.ಎ.ರಾಮದಾಸ್, ಕಾರ್ಯದರ್ಶಿಯಾಗಿ ಕೆ.ಪಿ.ಪ್ರದ್ಯುಮ್ನ ಮತ್ತು ಸಹ ಕಾರ್ಯದರ್ಶಿಯಾಗಿ ಎನ್ ಆರ್ ಮಂಜುನಾಥ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ವಿವರಗಳಿಗೆ ಈ ದೂರವಾಣಿಗಳನ್ನು ಸಂಪರ್ಕಿಸಬಹುದು.

ಸಂಚಾಲನ ಸಮಿತಿಯ ಸದಸ್ಯರ ಪರವಾಗಿ,

ಕೆ.ಪಿ.ಪ್ರದ್ಯುಮ್ನ
ದೂರವಾಣಿ: 94482 91368
ಇ-ಮೈಲ್ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+