ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ರಾತ್ರಿ ಒಬಾಮಾ ಅಧಿಕಾರ ಸ್ವೀಕಾರ

By Staff
|
Google Oneindia Kannada News

ವಾಷಿಂಗ್ಟನ್, ಜ. 20 : ಅಮೆರಿಕದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಅದರಲ್ಲೂ ಕಪ್ಪು ವರ್ಣೀಯರ ದೇಶಕ್ಕೆ ಇಂದು ಅವಿಸ್ಮರಣೀಯ ದಿನವಾಗಿದೆ. ಜಗತ್ತಿನ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕದ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಬರಾಕ್ ಒಬಾಮಾ ವಿಶ್ವದ ಬಲಾಢ್ಯ ವ್ಯಕ್ತಿ ಎನ್ನಿಸಲಿದ್ದಾರೆ. ಅವರ ವೈಟ್ ಹೌಸ್ ಪ್ರವೇಶಕ್ಕೆ ಭಾರಿ ಸಿದ್ದತೆ ನಡೆದಿದ್ದು. ಹಿಂದೆಂದೂ ಕಾಣದಂತಹ ಸಂಭ್ರಮದ ದೃಶ್ಯ ಎಲ್ಲೆಲ್ಲೂ ಸಾಮಾನ್ಯವಾಗಿದೆ.

ಅಮೆರಿಕದ 44ನೇ ಅಧ್ಯಕ್ಷರಾಗಿ 47 ಹರೆಯದ ಬರಾಕ್ ಒಬಾಮಾ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಇತಿಹಾಸವನ್ನು ನಿರ್ಮಿಸಲಿದ್ದಾರೆ. ಇಂದು ರಾತ್ರಿ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದೆ. ಮಾಜಿ ಸಮುದಾಯ ಸಂಘಟಕನೊಬ್ಬ ವಿಶ್ವದ ಬಲಿಷ್ಠ ದೊಡ್ಡಣ್ಣನ ಪಾತ್ರ ನಿರ್ವಹಿಸಲು ಇಂದಿನಿಂದ ಶ್ರೀಕಾರ ಹಾಕಲಿದ್ದಾರೆ. ಆದರೆ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಹಣಕಾಸು ಸ್ಥಿತಿ ತೀವ್ರ ಕುಸಿತ ಕಂಡು ಮುಗ್ಗಟ್ಟು ಎದುರಿಸುತ್ತಿದೆ. ಇದನ್ನು ಸರಿಪಡಿಸಿ ಮತ್ತೆ ದೇಶವನ್ನು ಸಮೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಒಬಾಮಾ ಮೇಲಿದೆ.

ಒಬಾಮಾ ಪ್ರಮಾಣ ವಚನ ಸ್ವೀಕಾರಕ್ಕೆ ಭರ್ಜರಿ ಸಿದ್ದತೆ ನಡೆಸಿದ್ದು, 40 ಸಾವಿರ ಮಂದಿಗೆ ಊಟದ ವ್ಯವಸ್ಥೆ, 363 ಕೆಜಿ ಮಾಂಸದ ಊಟ, 33,9500 ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧ ದೇಶಗಳ ಗಣ್ಯರು ಉಳಿದುಕೊಳ್ಳಲು ಸುಮಾರು 600 ಹೋಟೆಲ್ ಗಳಲ್ಲಿ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಮೂಲದ ಪ್ರಕಾರ ಪ್ರಮಾಣ ವಚನ ಕಾರ್ಯಕ್ರಮಕ್ಕೆ 196 ಕೋಟಿ ರುಪಾಯಿಗಳ ವೆಚ್ಚ ಮಾಡಲಾಗಿದೆ. ಇದರೊಂದಿಗೆ ಉಪಾಧ್ಯಕ್ಷ ಜೋಯ್ ಬಿಡೆನ್ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಬಾಮಾ ಸರ್ಕಾರದಲ್ಲಿ ಭಾರತದೊಂದಿಗೆ ಉತ್ತಮ ಸ್ನೇಹ ಹೊಂದಿರುವ ಇಬ್ಬರು ವ್ಯಕ್ತಿಗಳು ಇರುವುದು ಸಂತಸ ಸಂಗತಿಯಾಗಿದೆ. ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಉಪಾಧ್ಯಕ್ಷ ಜೋಯ್ ಬಿಡೆನ್ ಭಾರತದ ಆಪ್ತ ಸ್ನೇಹಿತರಾಗಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X