ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆ ಪಾತಾಳ ಕಂಡ ಸತ್ಯಂ

By Staff
|
Google Oneindia Kannada News

ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ.

ಇಂದು ಬೆಳಗ್ಗೆ ಆರಂಭದಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸತ್ಯಂ ಕಂಪ್ಯೂಟರ್ಸ್ ನ ಷೇರಿನ ಸೆನ್ಸಕ್ಸ್ 9564 ಇತ್ತು. ಆದರೆ ರಾಮಲಿಂಗರಾಜು ಅವರ ರಾಜೀನಾಮೆ ಘೋಷಣೆಯಾಗುತ್ತಿದ್ದಂತೆಯೇ ಮಧ್ಯಾಹ್ನ 1.45 ರ ಹೊತ್ತಿಗೆ ಇದರ ಸೂಚ್ಯಂಕ ಬರೀ 772 ಅಂಶಗಳ ಇಳಿಕೆ ಕಂಡಿದೆ. ಇದರ ಜೊತೆಗೆ ರಾಷ್ಟ್ರೀಯ ಷೇರು ಮಾರುಕಟ್ಟೆ ಮೇಲೆ ರಾಜೀನಾಮೆ ಪ್ರಕರಣ ತೀವ್ರ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಸತ್ಯಂ ಕಂಪನಿ ಸೂಚ್ಯಂಕ 2908 ಇದ್ದು ಮಧ್ಯಾಹ್ನದ ಹೊತ್ತಿಗೆ ಗಮನಾರ್ಹ ಕುಸಿತು ಕಂಡು ಕೇವಲ 200 ಅಂಶಗಳ ಇಳಿಕೆ ಕಂಡಿದೆ. ಸಮೀಪ ಬಂದು ನಿಂತಿದೆ. ಇದು ಸತ್ಯಂ ಕಂಪನಿಯ ಮೇಲೆ ಅಗಾಧ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಇನ್ನೊಂದು ಸುಮಾರು 1200 ಅಧಿಕ ಮೊತ್ತವನ್ನು ಅವ್ಯವಹಾರ ನಡೆಸಿರುವ ರಾಮಲಿಂಗರಾಜು ವಿರುದ್ಧ ವ್ಯಾಪಕ ಟೀಕೆ ಟಿಪ್ಪಣಿಗಳು ವ್ಯಕ್ತವಾಗತೊಡಗಿವೆ. ಕಂಪನಿ ನೆಚ್ಚಿಕೊಂಡು ಷೇರು ಹಾಕಿದ ಲಕ್ಷಾಂತರ ಮಂದಿ ತಮ್ಮ ಹಣವನ್ನು ನೀರಿನಲ್ಲಿ ಹೋಮ ಮಾಡಲಾಯಿತೆಂದು ಗೋಳಾಡತೊಡಗಿದ್ದಾರೆ. ಸತ್ಯಂ ಕಂಪನಿಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸೇಬಿ (Security Exchnage Baord of India) ರಾಮಲಿಂಗರಾಜು ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಂಪನಿಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ವಂಚನೆಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಸೂಚನೆ ನೀಡಿದೆ. ಒಂದು ಮೂಲಗಳು ಪ್ರಕಾರ ಸೇಬಿ (SEBI) ರಾಮಲಿಂಗರಾಜು ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಹೀಗೆನಾದರೂ ಆದಲ್ಲಿ ರಾಮಲಿಂಗರಾಜು ಅವರಿಗೆ 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದ ಪ್ರಸಂಗ ಎದುರಾಗಲಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಸಿಇಒ ರಾಮಲಿಂಗರಾಜು ರಾಜೀನಾಮೆ
ಸತ್ಯಂ ಅವ್ಯವಹಾರ ತನಿಖೆಗೆ ಕೇಂದ್ರ ಆಸಕ್ತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X