ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30ಕ್ಕೂ ಹೆಚ್ಚು ಉಗ್ರ ಸಂಘಟನೆಗೆ ಪಾಕ್ ನೆಲೆ

By Staff
|
Google Oneindia Kannada News

ನವದೆಹಲಿ, ಜ. 2 : ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ, ಇಂದಿಗೂ ಪಾಕ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸತೊಡಗಿವೆ ಎಂದು ಕೇಂದ್ರದ ರಕ್ಷಣಾ ಸಚಿವ ಎ ಕೆ ಎಂಟನಿ ಆರೋಪಿಸಿದರು.

ನವದಹೆಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ನೆಲೆದಲ್ಲಿರುವ ಹಾಗೂ ಭಾರತಕ್ಕೆ ಬೇಕಿರುವ ಮೊಸ್ಟ್ ವಾಟೆಂಡ್ ಉಗ್ರರನ್ನು ಪಾಕ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಬೇಕು. ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಪಾಕ್ ಸರ್ಕಾರ ಉಗ್ರರ ವಿರುದ್ಧ ಕ್ರಮಕೈಗೊಂಡಿದ್ದೇವೆ ಎಂದು ಬರೀ ಬಾಯಿ ಮಾತಿನಿಂದ ಹೇಳಿದರೆ ಸಾಲದು, ಕೃತಿಯಲ್ಲಿ ತೋರಿಸಬೇಕು. ಭಾರತಕ್ಕೆ ಬೇಕಿರುವ ಪಾಪಿಗಳನ್ನು ನಮ್ಮಕೈಗಿಡಬೇಕು ಎಂದು ಎಂಟನಿ ಸ್ಪಷ್ಟ ಸಂದೇಶ ನೀಡಿದರು.

ಪಾಕಿಸ್ತಾನದಲ್ಲಿ ಇಂದಿಗೂ 30ಕ್ಕೂ ಅಧಿಕ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅದಕ್ಕೆ ಸಾಕಷ್ಟು ಪುರಾವೆಗಳು ಭಾರತದ ಬಳಿ ಇವೆ. ಇಷ್ಟಾದರೂ ಕೂಡಾ ಪಾಕಿಸ್ತಾನದ ಸರ್ಕಾರ ತನ್ನ ಮೊಂಡು ವಾದವನ್ನು ಮುಂದುವರಿಸಿದೆ. ಭಾರತದ ಸಹನೆಗೂ ಒಂದು ತಾಳ್ಮೆ ಇದೆ. ದೇಶ ರಕ್ಷಣೆಗೆ ಯಾವ ಯೋಚನೆ ಇಲ್ಲದೆ ಅನಿವಾರ್ಯವಾಗಿ ಎದುರಾಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತದೆ ಎಂದು ಎಂಟನಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಯುದ್ಧ ಸಾರುವ ಕುರಿತು ಮಾತನಾಡಿದರು. ನಾವು ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದೇವೆ. ದೇಶದ ಭದ್ರತಗೆ ನಮ್ಮ ಸೈನಿಕರು ಸರ್ವಸನ್ನದ್ದವಾಗಿದ್ದಾರೆ ಎಂದು ಎಂಟನಿ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)
ಪಾಕ್ ಪರ ನಿಂತ ಊಸರವಳ್ಳಿ ಅಮೆರಿಕ
ಭಯೋತ್ಪಾದನೆಯೇ ಚುನಾವಣಾ ಅಸ್ತ್ರ: ಮೋದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X