ಬಾಂಗ್ಲಾ - ಶೇಕ್ ಹಸೀನಾ ಪ್ರಚಂಡ ಜಯ
ಢಾಕಾ, ಡಿ. 30 : ಏಳು ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಅದರ ಮೈತ್ರಿಕೂಟ ಪ್ರಚಂಡ ಗೆಲುವು ಸಾಧಿಸಿದೆ. ಬಾಂಗ್ಲಾ ಸಂಸತ್ತಿನ ಒಟ್ಟು 300 ಸ್ಥಾನಗಳಲ್ಲಿ ಅವಾಮಿ ಲೀಗ್ 258 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು , ಬೇಗಂ ಖಲೀದಾ ಜಿಯಾ ನೇತೃತ್ವದ ನ್ಯಾಷನಲಿಸ್ಟ್ ಪಕ್ಷ ಕೇವಲ 31 ಕ್ಷೇತ್ರಗಳಲ್ಲಿ ಜಯಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ.
ಶೇಖ್ ಹಸೀನಾ ಗೆಲುವಿನ ಮೂಲಕ ಭಾರತ-ಬಾಂಗ್ಲಾ ಸಂಬಂಧ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಖಲೀದಾ ಜಿಯಾ ಪಾಕಿಸ್ತಾನದ ಪರ ಎಂಬುದು ಗುಪ್ತವಾದ ಸಂಗತಿ ಏನಲ್ಲ. 2001ರಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಹೀನಾಯ ಸೋಲು ಅನುಭವಿಸಿತ್ತು. ಆಗ ಕೂಡ ಶೇಕ್ ಹಸೀನಾ ಭಾರತದೊಂದಿಗೆ ಉತ್ತಮ ನವದೆಹಲಿಯೊಂದಿಗೆ ಉತ್ತಮ ರಾಜಕೀಯ ಸಂಬಂಧವನ್ನೇ ಹೊಂದಿದ್ದರು. ನಂತಪ ಅಧಿಕಾರದ ಚುಕ್ಕಾಣಿ ಹಿಡಿದ ಖಲೀದಾ ಆಡಳಿತದಿಂದ ಉಭಯ ದೇಶಗಳ ಸಂಬಂಧದಲ್ಲಿ ಕೊಂಟ ಹಿನ್ನೆಡೆ ಕಂಡಿದ್ದು ಸುಳ್ಳಲ್ಲ.
ಈ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಮತದಾನ ಮಾಡದಂತೆ ತಡೆಯಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ನ್ಯಾಷನಲಿಸ್ಟ್ ಪಕ್ಷದ ವಕ್ತಾರರು ಡಾಕಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications