ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಂದಲೇ ಕರ್ಕರೆ ಸಾವು: ಮುಂಬೈ ಪೊಲೀಸ್

By Staff
|
Google Oneindia Kannada News

ಮುಂಬೈ, ಡಿ. 23 :ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆಂದು ಅವರ ಮರಣೋತ್ತರ ಪರೀಕ್ಷೆಯ ವರದಿಗಳು ತಿಳಿಸಿದೆ. ಮುಂಬೈನ ಅಪರಾಧ ವಿಭಾಗ ಮಂಗಳವಾರ ವರದಿಯನ್ನು ಬಿಡುಗಡೆ ಮಾಡಿತು. ಈಗ ಏನಂತೀರಾ ಆಂತುಳೆ ಸಾಬೇಬರೆ?

ಒಟ್ಟು ನಾಲಕ್ಕು ಗುಂಡುಗಳು ಕರ್ಕರೆಯವರ ಎದೆಯನ್ನು ಸೀಳಿವೆ. ಸಾವಿಗೆ ಮುನ್ನ ಕರ್ಕರೆ ಅವರ ವೈರಲೈಸ್ ಸಾಧನಕ್ಕೆ ಬಂದಿರುವ ಸಂದೇಶಗಳ ಮಾಹಿತಿ ಕೂಡ ಪೂರ್ಣವಾಗಿ ಲಭ್ಯವಿದೆ. ಉಗ್ರರ ಗುಂಡಿಗೆ ಕರ್ಕರೆ ಬಲಿಯಾಗಿದ್ದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮುಂಬೈ ಪೊಲೀಸ್ ದಾಖಲೆಗಳು ಸ್ಪಷ್ಟಪಡಿಸಿವೆ.

ಮಾಲೆಗಾಂವ್ ಸ್ಫೋಟದ ರುವಾರಿಗಳನ್ನು ಬಹಿರಂಗಗೊಳಿಸಿದ್ದಕ್ಕೆ ಹೇಮಂತ್ ಕರ್ಕರೆ ಅವರನ್ನು ಹಿಂದೂಗಳೇ ಕೊಂದಿದ್ದಾರೆ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ಸಚಿವ ಅಂತುಳೆ, ಆ ಬಗ್ಗೆ ಸ್ಪಷ್ಟನೆ ನೀಡದೆ, ರಾಜೀನಾಮೆ ಪತ್ರವನ್ನು ಪ್ರಧಾನಿಗೆ ರವಾನಿಸಿದ್ದರು. ಆದರೆ ರಾಜೀನಾಮೆಯನ್ನು ಯುಪಿಎ ಸರ್ಕಾರ ಅಂಗೀಕರಿಸಲಿಲ್ಲ. ಪ್ರತಿಪಕ್ಷಗಳು ಸೋಮವಾರ ಈ ವಿಷಯವಾಗಿ ತೀವ್ರ ಗದ್ದಲ ನಡೆಸಿದ ಪರಿಣಾಮ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಗಿತ್ತು.
(ಏಜೆನ್ಸೀಸ್)
ಕಲಾಪ ನುಂಗಿದ ಅಂತುಳೆ ಪ್ರಕರಣದ ಗಲಾಟೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X