ಡಿಎನ್ಎ ಪತ್ರಿಕೆ ಹಂಚುವ ಹುಡುಗರಿಗೆ ಜಯ

ಬೆಂಗಳೂರು, ಡಿ. 18 : ಮುಂಬೈನಿಂದ ಪ್ರಕಟವಾಗುವ ಡಿಎನ್ಎ ಆಂಗ್ಲ ಪತ್ರಿಕೆಯ ಬೆಂಗಳೂರು ಆವೃತ್ತಿಯ ಆಡಳಿತ ಮಂಡಳಿ ಮತ್ತು ಪತ್ರಿಕೆ ಹಂಚುವ ಹುಡುಗರ ನಡುವಿನ ಹೋರಾಟದಲ್ಲಿ ಪತ್ರಿಕೆ ಹಂಚುವ ಹುಡುಗರಿಗೆ ಜಯ ಲಭಿಸಿದೆ. ಪತ್ರಿಕೆ ಹಂಚುವ ಹುಡುಗರು ಮೊದಲೇ ಒಂದು ರುಪಾಯಿ ಕೊಟ್ಟು ಖರೀದಿಸಬೇಕೆಂಬ ಆಡಳಿತ ಮಂಡಳಿಯ ಧೋರಣೆಯನ್ನು ವಿರೋಧಿಸಿ ಬೀದಿಗಿಳಿದಿದ್ದ ಹುಡುಗರು ಈಗ ನಿರಾಳವಾಗಿದ್ದಾರೆ.

ಡಿಎನ್ಎ ಆಡಳಿತ ಮಂಡಳಿ ಮತ್ತು ಪತ್ರಿಕೆ ವಿತರಕರ ನಡುವೆ ವ್ಯವಹಾರ ಕುದುರಿದ್ದು ಆಡಳಿತ ಮಂಡಳಿ ಪತ್ರಿಕಾ ನೀತಿಯನ್ನು ತಿರುವುಮುರುವು ಮಾಡಿದೆ. ಈ ಒಪ್ಪಂದದಂತೆ ಪತ್ರಿಕೆ ಹಂಚುವ ಹುಡುಗರು ಹಣ ನೀಡುವಂತಿಲ್ಲ. ಬದಲಾಗಿ, ವಿತರಕರು ಆಡಳಿತ ಮಂಡಳಿಯ ಜೊತೆ ನೇರವಾಗಿ ವ್ಯವಹರಿಸಲಿದ್ದಾರೆ. ಪತ್ರಿಕೆ ಹಂಚುವ ಹುಡುಗರು ಪತ್ರಿಕೆ ಹಂಚುವ ಕೆಲಸ ಮಾತ್ರ ಮಾಡಲಿದ್ದಾರೆ.

ಪೇಪರ್ ಹಾಕರ್ ಗಳು ಕೂಡ ಬ್ಯುಸಿನೆಸ್ ಪಾರ್ಟನರ್ ಗಳಾದ್ದರಿಂದ ಪತ್ರಿಕೆ ಖರೀದಿಸಿ ಹಂಚಬೇಕೆಂದು ಮೊದಲು ಆಡಳಿತ ಮಂಡಳಿ ಪಟ್ಟುಹಿಡಿದಿತ್ತು. ಆದರೆ ಹಂಚುವವರು, ನಮ್ಮದೇನಿದ್ದರೂ ಹಂಚಿ, ಸೇವಾ ಶುಲ್ಕ ಪಡೆಯುವ ಕೆಲಸ ಮಾತ್ರ. ನಮ್ಮಿಂದ ಹಣ ವಸೂಲಿ ಮಾಡುವುದು ಪತ್ರಿಕಾ ಧರ್ಮಕ್ಕೆ ವಿರೋಧ ಎಂದು ವಾದಿಸಿ ಹೋರಾಟಕ್ಕಿಳಿದಿದ್ದರು.

ಗಂಡ ಹೆಂಡಿರ ಜಗಳದಲಿ ಕೂಸು ಬಡವಾಯ್ತು ಎಂಬಂತೆ, ಬಡವಾಗಿದ್ದು ವಾರ್ಷಿಕ ಚಂದಾ ನೀಡಿದ ಓದುಗ! ಪತ್ರಿಕೆ ಹಂಚುವವರು ಬೀದಿಗಿಳಿದಿದ್ದರಿಂದ ಓದುಗರು ಪತ್ರಿಕೆ ಸಿಗದೆ ಪರದಾಡುವಂತಾಗಿತ್ತು. ವಾರ್ಷಿಕ ಚಂದಾ ವಸೂಲಿ ಮಾಡಿ ಪತ್ರಿಕೆ ದಿನವೂ ವಿತರಿಸದಿದ್ದರೆ ಹೇಗೆಂದು ಓದುಗರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೊಸ ಒಡಂಬಡಿಕೆಯಿಂದಾಗಿ ಹಂಚುವವರಿಗೆ ಮತ್ತು ಓದುಗರಿಗೆ ನಿರಾಳವಾದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಡಿಎನ್ಎ ಪತ್ರಿಕೆ ಹಂಚುವ ಹುಡುಗರ ಹೋರಾಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+