ಮಾಜಿ ಸಚಿವ ಎಚ್ ಎನ್ ನಂಜೇಗೌಡ ನಿಧನ
ಬೆಂಗಳೂರು, ಡಿ. 18 : ಮಾಜಿ ಸಚಿವ, ನೀರಾವರಿ ತಜ್ಞ ಎಚ್ ಎನ್ ನಂಜೇಗೌಡ ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು, ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು, ತಕ್ಷಣ ಸಾಗರ್ ಅಪೊಲೋ ಆಸ್ಪತ್ರೆ ದಾಖಲಿಸಲಾಯಿತಾದರೂ ಜಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 1.45ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಯಶೋಧಮ್ಮ ಹಾಗೂ ಪುತ್ರ ಕೃಷ್ಣಮೂರ್ತಿ ಸೇರಿ ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ. ನಂಜೇಗೌಡರು ಬಸವನಗುಡಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಗೆದ್ದು ಬಂದು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೆಲ ರಾಜಕೀಯ ಲೆಕ್ಕಾಚಾರದಿಂದ ಬಿಜೆಪಿ ಸೇರ್ಪಡೆಗೊಂಡಿದ್ದ ನಂಜೇಗೌಡ, ಅತೀ ಶೀಘ್ರದಲ್ಲಿ ಅಲ್ಲಿಂದ ಹೊರಬಿದ್ದಿದ್ದರು. ಬಿಜೆಪಿಯೊಂದು ಗರ್ಭಗುಡಿಯ ಪಕ್ಷವೆಂದು ಮೊದಲಿಸಿದ್ದ ಅವರು ನಂತರ ಜೆಡಿಯುನಲ್ಲಿ ಗುರುತಿಸಿಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications