ಪ್ರತಿಮೆಗಳ ಅನಾವರಣ ಮಾಡು ಸರ್ವಜ್ಞ!
ಚೆನ್ನೈ. ಡಿ. 16 : ಹೋಗೇನಕಲ್ ವಿವಾದ ಇನ್ನು ಹೊಗೆಯಾಡುತ್ತಿರುವ ಬೆನ್ನಲ್ಲೇ ಸೌಹಾರ್ದಕಾರಿ ಸುದ್ದಿ ಚೆನ್ನೈನಿಂದ ಹೊರಬಿದ್ದಿದೆ. ಬರುವ ಮಕರಸಂಕ್ರಾತಿ ದಿನದಂದು ಚೆನ್ನೈನಲ್ಲಿ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಸಂಕ್ರಾಂತಿ ಹಬ್ಬದ ಮರುದಿನ ಬರುವ ಪೊಂಗಲ್ ಹಬ್ಬದ ದಿನದಂದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ ಎಂದು ಗೊತ್ತಾಗಿದೆ. ಕನ್ನಡ ರಣಧೀರ ಪಡೆಯ ಅಧ್ಯಕ್ಷ ಅರ್.ಎಸ್.ಏನ್. ಗೌಡ ನೇತೃತ್ವದಲ್ಲಿ, ಹಂಪಿಯ ಸರ್ವಜ್ಞ ಪೀಠದ ಮಧುಮಯಾನಂದ ಸ್ವಾಮೀಜಿ, ದಾಬಸ್ ಪೇಟೆಯ ಶಿವಲಿಂಗ ಸ್ವಾಮೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀರಂಗಾಚಾರ್ಯ ನೇತೃತ್ವದ ನಿಯೋಗ ಇತ್ತೀಚೆಗೆ ಕರುಣಾನಿಧಿಯವರನ್ನ ಭೇಟಿ ಮಾಡಿದಾಗ ಈ ಭರವಸೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ಕನ್ನಡ ಪತ್ರಿಕೆ ವರದಿ ಮಾಡಿದೆ.
(ಏಜನ್ಸೀಸ್)












Click it and Unblock the Notifications