ಸಂದೀಪ್ ಪರ ನಾನು ಕ್ಷಮೆಯಾಚಿಸುವೆ

ಮುಂಬೈ ದಾಳಿಯಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲು ಬಾಬಾ ರಾಮದೇವ್ ಪತಂಜಲಿ ಯೋಗಪೀಠ ಆಯೋಜಿಸಿದ್ದ ಸಮಾರಂಭದಲ್ಲಿ ಸಂದೀಪ್ ತಂದೆ ಉನ್ನಿಕೃಷ್ಣನ್ ಸೋಮವಾರ ಭಾಗವಹಿಸಿದ್ದರು. ನಾನು ಸಂದೀಪ್ ಪರವಾಗಿ ಕ್ಷಮೆ ಕೋರುತ್ತೇನೆ. ಆತ ಬದುಕಿದ್ದರೆ ಇನ್ನೂ 20 ವರ್ಷ ದೇಶಸೇವೆ ಮಾಡುತ್ತಿದ್ದ ಎಂದು ಸನ್ಮಾನ ಸ್ವೀಕರಿಸಿದ ಅವರು ಭಾವುಕರಾಗಿ ನುಡಿದರು.
ಮಗನ ಮರಣಕ್ಕೆ ದೇಶಾದ್ಯಂತ ವ್ಯಕ್ತವಾದ ಸಂತಾಪ ತಮ್ಮನ್ನು ಮೂಕನನ್ನಾಗಿಸಿದೆ ಎಂದರು. ಕಾರ್ಯಕ್ರಮದಲ್ಲಿ ಸಂದೀಪ್ ತಾಯಿ ಧನಲಕ್ಷ್ಮಿ ಸಹ ಪಾಲ್ಗೊಂಡಿದ್ದರು. ಮುಂಬೈ ದಾಳಿಯ ಹುತಾತ್ಮರ ಕುಟುಂಬಗಳಿಗೆ ಹಾಗೂ ಬಾತ್ಸಾಹೌಸ್ ನಲ್ಲಿ ಮಡಿದ ಸೂಪರ್ ಕಾಪ್ ಎಸ್ ಸಿ ಶರ್ಮಾ ಅವರಿಗೆ ತಲಾ ಐದು ಲಕ್ಷ ರು.ಗಳ ತೆಕ್ ವಿತರಿಸಲಾಯಿತು. ಮುಂಬೈ ದಾಳಿಯಲ್ಲಿ ಮೃತರಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಠ ಹೇಮಂತ್ ಕರ್ಕರೆ ಅವರ ಪುತ್ರಿ ಜೂಹಿ, ಕುಟುಂಬದ ಪರ ನಿಂತು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications