ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇಗಿದ್ದ, ಹೇಗಾದ ಗೊತ್ತಾ ನಮ್ಮ ದ್ರಾವಿಡೂ,

By Staff
|
Google Oneindia Kannada News

rahul dravid
ಚೆನ್ನೈ, ಡಿ. 16 : ಸತತ ವೈಫಲ್ಯ ಕಾಣುತ್ತಿರುವ 'ದಿ ವಾಲ್' ಎಂದೇ ಖ್ಯಾತಿಯಾಗಿರುವ ರಾಹುಲ್ ದ್ರಾವಿಡ್ ಅವರ ಸದ್ಯದಲ್ಲಿಯೇ ತೆರೆ ಮರೆಗೆ ಸರಿಯಲಿದ್ದಾರೆಯೇ. ಕಳೆದ ಅನೇಕ ಪಂದ್ಯಗಳ ರಾಹುಲ್ ಅವರ ಆಟದ ವೈಖರಿ ಗಮನಿಸಿದರೆ, ಇಂಥದ್ದೊಂದು ಸಂಶಯ ಕಾಡದೆ ಇರದು. ಒಂದು ಕಾಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಸಮರ್ಥವಾಗಿ ತಂಡವನ್ನು ಮುನ್ನೆಡೆಸಿದ ದ್ರಾವಿಡ್ ಇದೀಗ ತೀರ ನೀರಸ ಪ್ರದರ್ಶನ ನೀಡುತ್ತಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಹುಟ್ಟಿಸಿದೆ.

ಆಪತ್ಕಾಲದಲ್ಲಿ ಅಪದ್ಬಾಂಧವನಾಗಿ ತಂಡದ ನೆರವಿಗೆ ಧಾವಿಸುತ್ತಿದ್ದ ದ್ರಾವಿಡ್ ಅಟ ಎಲ್ಲಿ ಹೋಯಿತು. ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಂತು ಎದುರಾಳಿ ಬೌಲರ್ ಗಳನ್ನು ಕೆಂಗಡುವಂತೆ ಮಾಡಿ ಕ್ಷಣಮಾತ್ರದಲ್ಲಿ ಬೌಲ್ ನ್ನು ಬೌಂಡರಿಗೆ ಅಟ್ಟುತ್ತಿದ್ದ ಆಟ ಎಲ್ಲಿ ಮರೆಯಾಯಿತು. ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿಂತೂ ದ್ರಾವಿಡ್ ಆಟ ತೀರಾ ಕೆಳಮಟ್ಟದ್ದಾಗಿದೆ. ಅವರ ವಿಕೆಟ್ ಒಪ್ಪಿಸುವ ಬಗೆ ಎಂಥವರಿಗೂ ಕೋಪ ತರಿಸುತ್ತದೆ. ದ್ರಾವಿಡ್ ಕ್ರಿಸ್ ನಲ್ಲಿ ಇದ್ದರೆ, ಗೆಲುವು ಕಾಣದಿದ್ದರೂ ಸೋಲಂತೂ ಅನುಭವಿಸುತ್ತಿರಲಿಲ್ಲ ಎಂದು ಎಲ್ಲರೂ ನಂಬಿದ್ದರು. ಆದರೆ, ಹೇಗಿದ್ದ ಹೇಗಾದ ಗೊತ್ತಾ ನಮ್ಮ ದ್ರಾವಿಡ್ ಅನ್ನುವ ಸ್ಥಿತಿಗೆ ಬಂದು ತಲುಪಿದ ಎನ್ನುವ ಮಾತು ಅವರ ಅಭಿಮಾನಿಗಳು ಬೇಸರ ತರಿಸಿದರೂ ಸದ್ಯದ ಸ್ಥಿತಿಯಲ್ಲಿ ಇದು ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.

ಕಳೆದ ಎರಡು ವಿಶ್ವಕಪ್ ನಲ್ಲಿ ದ್ರಾವಿಡ್ ಆಡಿದ ಪರಿ ಇದೆಯಲ್ಲ ಅದನ್ನೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಏಕೆ, ಬರುಬರುತ್ತಾ ರಾಯರ ಕುದುರೆ ಕತ್ತೆಯಾಯಿತೂ ಗೊತ್ತಿಲ್ಲ. ಇತ್ತೀಚೆಗೆ ದ್ರಾವಿಡ್ ಕ್ರಿಸ್ ಬಂದ ತಕ್ಷಣ ಮತ್ತೆ ಪೆವಿಲಿಯನ್ ಗೆ ಮರಳುತ್ತಿರುವುದು ತೀವ್ರ ಬೇಸರ ಹುಟ್ಟಿಸಿದೆ. ಅವರನಲ್ಲಿನ ಅಟ ಮುಗಿದಿದೆಯಾ, ನಿವೃತ್ತಿ ಬಯಸುತ್ತಿದ್ದಾರೆ, ಯುವಕರ ಆಟದ ಮುಂದೆ ಅವರ ಆಟ ಮಂಕು ಕವಿದಿದೆಯಾ, ಯಾವ ಕಾರಣದಿಂದ ನೋಡಿದರೂ ರಾಹುಲ್ ದ್ರಾವಿಡ್ ಅವರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಉಳಿದಿರುವುದು ಏಕೈಕ ದಾರಿ ಒಂದೇ .....?

ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ನಂತರ ಎರಡುನೇ ಟೆಸ್ಟ್ ರಾಹುಲ್ ದ್ರಾವಿಡ್ ಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಸಜ್ಜಾಗಿದೆ ಎಂದು ಗೊತ್ತಾಗಿದೆ. ಭಾರತೀಯ ಕ್ರಿಕೆಟ್ ತಂಡದ ಅಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಎರಡನೇ ಟೆಸ್ಟ್ ಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ದಿ ವಾಲ್ ನ ಕ್ರಿಕೆಟ್ ಜೀವನ ಶೀಘ್ರದಲ್ಲಿ ಅಂತ್ಯಗೊಳ್ಳಲಿದೆಯಾ ಗೊತ್ತಿಲ್ಲ. ಎಲ್ಲವನ್ನೂ ಕಾಲವೇ ನಿರ್ಣಯಿಸಬೇಕು.

(ದಟ್ಸ್ ಕನ್ನಡ ವಾರ್ತೆ)
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ವೀರೂಚಿತ ಗೆಲುವು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X