ನಾಡೋಜ ಪಾಪುಗೆ ನೃಪತುಂಗ ಪ್ರಶಸ್ತಿಗೌರವ

ಬೆಂಗಳೂರು,ಡಿ .16: ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಸಂಯುಕ್ತವಾಗಿ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.18 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪದ್ಮಭೂಷಣ ರಾಜರ್ಷಿ ಡಾ ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಫಾಟಿಸಲಿದ್ದಾರೆ. ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾರಿಗೆ ಸಚಿವ ಆರ್. ಅಶೋಕ್ ಅವರು ಅರಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಕನ್ನಡದ ಹಿರಿಯ ವಿದ್ವಾಂಸರಾದ ನಾಡೋಜ ಡಾ ಪಾಟೀಲ ಪುಟ್ಟಪ್ಪ ಅವರಿಗೆ ನೀಡಿ ಗೌರವಿಸಲಾಗುವುದು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಲ್ಲೂರು ಪ್ರಸಾದ್ ಅವರು ಅಧ್ಯಕ್ಷತೆವಹಿಸಲಿದ್ದಾರೆ.

ಕಾವ್ಯ ಕ್ಷೇತ್ರದಲ್ಲಿ "ಪ್ರಶ್ನೆ ಮತ್ತು ದೇವರು" ಕೃತಿಕಾರರಾದ ಭೀಮನಹಳ್ಳಿ ರಮೇಶಬಾಬು, ಕಥೆ ಕ್ಷೇತ್ರದಲ್ಲಿ"ಚಂದ್ರಸಾನಿ" ಕೃತಿಕಾರರಾದ ನಾಗಮಂಗಲ ಕೃಷ್ಣಮೂರ್ತಿ, ನಾಟಕ ಕ್ಷೇತ್ರದಲ್ಲಿ "ಕಾಡೋಳಗ ಕಳದಾವು ಮಕ್ಕಾಳು" ಕೃತಿಕಾರರಾದ ಕೆ.ಪಿ. ರೂಪಶ್ರೀ, ಪರಿಸರ ಕ್ಷೇತ್ರದಲ್ಲಿ "ಗಣಿಗಾರಿಕೆ ಮತ್ತು ಪರಿಸರ" ಕೃತಿಕಾರರಾದ ಸಂಗೀತ ಪಿ, ಅನುವಾದ ಕ್ಷೇತ್ರದಲ್ಲಿ "ನೆಪೋಲಿಯನ್ ಚಕ್ರವರ್ತಿಯ ಸಂಚಿತ ಕೊಲೆ ಕೃತಿಕಾರರಾದ ಅರವಿಂದ ಎಮ್. ಅಂಗಡಿ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ "ಅಕ್ಕಿ ಚುಕ್ಕಿ" ಕೃತಿಕಾರ ರೋಷನ್ ಛೋಪ್ರಾ, ಸಂಶೋಧನೆ ಕ್ಷೇತ್ರದಲ್ಲಿ "ಸೊಂಡೂರು ಭೂಹೋರಾಟ" ಕೃತಿಕಾರರಾದ ಅರುಣ್ ಜೋಳದಕೂಡ್ಲಿಗಿ ಹಾಗೂ ವೈಚಾರಿಕ ಕ್ಷೇತ್ರದಲ್ಲಿ "ಬದುಕಿಗಾಗಿ ಶಿಕ್ಷಣ" ದ ಕೃತಿಕಾರರಾದ ಅರವಿಂದ ಚೊಕ್ಕಾಡಿ ಅವರುಗಳಿಗೆ "ಅರಳು ಪ್ರಶಸ್ತಿ " ಯನ್ನು ನೀಡಿ ಗೌರವಿಸಲಾಗುತ್ತಿದೆ.
(ದಟ್ಸ್ ಕನ್ನಡಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+