ಹುತಾತ್ಮ ಯೋಧರಿಗೆ 3 ಕೋ ಪರಿಹಾರ:ಬಿಸಿಸಿಐ

ಚೆನ್ನೈ, ಡಿ. 16 : ಕಳೆದ ತಿಂಗಳು ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಹೊಂದಿದ್ದ ಹುತಾತ್ಮ ಯೋಧರ ಕುಟುಂಬಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 3 ಕೋಟಿ ರುಪಾಯಿ ಪರಿಹಾರ ಘೋಷಿಸಿದೆ.

ಸೋಮವಾರ ನಗರದ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪ್ರಥಮ ಟೆಸ್ಟ್ ನ ಅಂತಿಮ ದಿನದಂದು ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್ ಈ ಪರಿಹಾರವನ್ನು ಘೋಷಿಸಿದ್ದಾರೆ. ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಮಡಿದು ಹುತಾತ್ಮರಾದ ಹೀರೊಗಳ ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಆದರೆ, ಅವರ ಕುಟುಂಬಗಳಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ಒಟ್ಟು 3 ಕೋಟಿ ರುಪಾಯಿಗಳ ಪರಿಹಾರವನ್ನು ಬಿಸಿಸಿಐದಿಂದ ಘೋಷಿಸಲಾಗಿದೆ. ಇದರಲ್ಲಿ 2 ಕೋಟಿ ರುಪಾಯಿ ವೀರಮರಣ ಹೊಂದಿರುವ ಅಧಿಕಾರಿಗಳು, ಕಮಾಂಡೋಗಳು, ರಾಷ್ಟ್ರೀಯ ಭದ್ರತಾ ಪಡೆ ಹಾಗೂ ಪೊಲೀಸರ ಕುಟುಂಬಗಳಿಗೆ ನೀಡಲಾಗುವುದು. ಉಳಿದ 1 ಕೋಟಿ ರುಪಾಯಿ ಹಣವನ್ನು ದಾಳಿಯಲ್ಲಿ ಗಾಯಗೊಂಡಿರುವ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಶೀನಿವಾಸ್ ತಿಳಿಸಿದರು.

ಕಳೆದ ತಿಂಗಳು ನ. 26 ರಂದು ಮುಂಬೈ ನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಅಶೋಕ್ ಕಾಮ್ಟೆ ಹಾಗೂ ಕೇರಳದ ಮೂಲದ ಬೆಂಗಳೂರಿನ ಮೇಜರ್ ಸಂದೀಪ್ ವೀರಮರಣ ಅಪ್ಪಿದ್ದರು.

(ದಟ್ಸ್ ಕನ್ನಡ ವಾರ್ತೆ)
ಸಂದೀಪ್ ಪರ ನಾನು ಕ್ಷಮೆಯಾಚಿಸುವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+