ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಹಿಟ್ ವಿಕೆಟ್ ಮಾಡಿಕೊಂಡ್ವಿ: ಅಡ್ವಾಣಿ

By Staff
|
Google Oneindia Kannada News

ನವದೆಹಲಿ, ಡಿ. 16 : ನಮಗೆ ಎದುರಾಳಿ ತಂಡ ಪ್ರಬಲ ಪೈಪೋಟಿ ಏನೂ ಇರಲಿಲ್ಲ, ಆದರೆ, ನಮಗೆ ನಾವೇ ಹಿಟ್ ವಿಕೆಟ್ ಮೂಲಕ ಔಟಾಗಿ ಕಣದಿಂದ ಹೊರಬಿದ್ದೇವು. ಇದು ಭಾರತ ಮತ್ತು ಇಂಗ್ಲೆಂಡ್ ತಂಡದ ಸುದ್ದಿಯಲ್ಲ ಬಿಡಿ, ಬದಲಿಗೆ ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಹಾಗೂ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ವ್ಯಾಖ್ಯಾನಿಸಿದ ಸೋಲಿನ ಪರಿ.

ರಾಜಸ್ತಾನ ಮತ್ತು ದೆಹಲಿಯಲ್ಲಿ ಪಕ್ಷದ ಸೋತಿದ್ದಕ್ಕೆ ಆತ್ಮಾಲೋಕನ ಮಾಡಿಕೊಂಡ ಆಡ್ವಾಣಿ, ಪಕ್ಷದಲ್ಲಿರುವ ಆಂತರಿಕ ಸಮಸ್ಯೆಗಳಿಂದ ನಾವು ಮುಖಭಂಗ ಅನುಭವಿಸಬೇಕಾಯಿತು ಎಂದು ಸೋಲೊಪ್ಪಿಕೊಂಡರು. ರಾಜಸ್ತಾನದಲ್ಲಿದ್ದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ಮೊದಲು ತಪ್ಪಾಯಿತು. ಅದರಿಂದ ತಪ್ಪುಗಳ ಸರಮಾಲೆಯೇ ನಮ್ಮನ್ನು ಬೆನ್ನಟ್ಟಿತು. ಅಲ್ಲಿದ್ದ ನಮ್ಮದೇ ಸರ್ಕಾರವನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ. ದೆಹಲಿ ಕೈಬಿಟ್ಟಿದ್ದು ಅತೀವ ನೋವು ತರುವ ಸಂಗತಿ ಎಂದು ಅಡ್ವಾಣಿ ಅಸಮಾಧಾನದಿಂದ ನುಡಿದರು.

ದೆಹಲಿ ಮತ್ತು ರಾಜಸ್ತಾನದಲ್ಲಿ ಪಕ್ಷ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದರಿಂದ ಬಿಜೆಪಿ ದೃತಿಗೆಟ್ಟಿಲ್ಲ. ಮುಂಬರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಧೂಳಿನಿಂದ ಎದ್ದು ಬರುತ್ತೇವೆ ಎಂದು ಅಡ್ವಾಣಿ ವಿಶ್ವಾಸದಿಂದ ಹೇಳಿದರು. ಯುಪಿಎ ಸರ್ಕಾರದ ದುರಾಡಳಿತ, ಭಯೋತ್ಪಾದನೆ ಬಗ್ಗೆ ಮೃದುಧೋರಣೆ, ಹಣದುಬ್ಬರ, ಭ್ರಷ್ಠಾಚಾರವನ್ನು ಅಸ್ತ್ರಗಳನ್ನಾಗಿಸಿ ಲೋಕಸಭೆಯ ಆಖಾಡಕ್ಕೆ ಇಳಿಯುತ್ತೇವೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಸೋಗಲಾಡಿತನವನ್ನು ಜನರೆದುರು ಬಯಲು ಮಾಡುತ್ತೇವೆ ಎಂದು ಅವರು ಹೇಳಿದರು.

(ಏಜನ್ಸೀಸ್)
ಮರುಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರಾಬಲ್ಯ ?
ನಗರದಲ್ಲಿ ಅಡ್ವಾಣಿ ಆತ್ಮಕಥೆ ಅನಾವರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X