ವಿಕ್ಟೋರಿಯಾದಿಂದ ಹೊರಬಿದ್ದ ಅಲ್ ಅಮೀನ್
ಬೆಂಗಳೂರು, ಡಿ. 15 : ಕಳೆದ ಎಂಟು ವರ್ಷಗಳಿಂದ ನಿರ್ಭಯವಾಗಿ ವಿಕ್ಟೋರಿಯಾ ತುರ್ತು ನಿಗಾ ಘಟಕದಲ್ಲಿ ನಡೆಯುತ್ತಿದ್ದ ಅಲ್ ಅಮೀನ್ ಕಾಲೇಜಿನ ಫಾರ್ಮಸಿ ಕಾಲೇಜನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಹೊರಹಾಕಿದೆ. ಕಳೆದ ಡಿ. 11 ರಂದು ಇಂಗ್ಲಿಷ್ ದೈನಿಕ ಮಿಡ್ ಡೇ ಯಲ್ಲಿ ಈ ಕುರಿತು ವಿಸ್ತೃತವಾಗಿ ತನಿಖಾ ವರದಿಯೊಂದು ಪ್ರಕಟವಾಗಿತ್ತು.
ವರದಿಗೆ ಸೂಕ್ತವಾಗಿ ಸ್ಪಂದಿಸಿದ ವೈದ್ಯಕೀಯ ಇಲಾಖೆ ಅಲ್ ಅಮೀನ್ ಕಾಲೇಜಿನ ಆಡಳಿತ ಮಂಡಳಿಗೆ ಸ್ಪಷ್ಟ ಸೂಚನೆ ನೀಡಿ ಕೂಡಲೇ ಸರ್ಕಾರಿ ಆಸ್ಪತ್ರೆಯಿಂದ ಹೊರನಡೆಯಬೇಕು ಎಂದು ಕಟ್ಟಪ್ಪಣೆ ವಿಧಿಸಿದ್ದರಿಂದ ಅಲ್ ಅಮೀನ್ ಕಾಲೇಜಿನ ಫಾರ್ಮಸಿ ಕಾಲೇಜು ವಿಕ್ಟೋರಿಯಾದಿಂದ ಔಟ್ ಆಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾರ್ವಜನಿಕರ ಸೇವೆ ಸಿಕ್ಕಂತಾಗಿದೆ. ಹೆಚ್ಚಿನ ವಿವರಗಳಿಗೆ ಓದಿ,
ಪೂರಕ ಓದಿಗೆ: ಗಮನಿಸಿ, ವಿಕ್ಟೋರಿಯಾ ಆಸ್ಪತ್ರೆ ಬಾಡಿಗೆಗಿದೆ












Click it and Unblock the Notifications