ಯಡಿಯೂರಪ್ಪ ಇದೀಗ ಡಾ.ಯಡಿಯೂರಪ್ಪ
ಬೆಂಗಳೂರು, ಡಿ. 14 : ಅಮೆರಿಕದ ಮಿಚಿಗನ್ ರಾಜ್ಯದ ಸಗಿನಾವೊ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಆಯ್ದ ಅತಿಗಣ್ಯ 500 ಆಹ್ವಾನಿತ ಕುಟುಂಬ ಸದಸ್ಯರು ಹಾಗೂ 5 ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಯಡಿಯೂರಪ್ಪ, ತಮಗೆ ಇಂತಹ ಅತ್ಯುನ್ನತ ಗೌವರ ಸಂದಿರುವುದು ತಮ್ಮ ಕಲ್ಪನೆಗೂ ಮೀರಿದ ವಿಚಾರವಾಗಿದೆ. ಈ ಗೌರವವನ್ನು ತಾವು ಕರ್ನಾಟಕ ರಾಜ್ಯದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಅರ್ಪಿಸುವುದಾಗಿ ತಿಳಿಸಿದರು. ಯಡಿಯೂರಪ್ಪ ಈ ಗೌರವವಕ್ಕೆ ಪಾತ್ರರಾದ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೆ ಅಲ್ಲ, ಡಾಕ್ಟರೇಟ್ ಪಡೆದವರಿಗೆ ಅಲ್ಲಿಯೇ ಸಭೆಯನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಕಲ್ಪಿಸಿದ್ದು ಕೂಡ ಇದೇ ಪ್ರಥಮ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಬಿಎಸ್ ವೈಗೆ ಡಾಕ್ಟರೇಟ್, ಪೂಜಾರಿ ವ್ಯಂಗ್ಯ












Click it and Unblock the Notifications