ಡಿ. 12 :ಕಲಾಂ, ರೊದ್ದಂಗೆ ಡಾಕ್ಟರೇಟ್ ಪ್ರದಾನ
ಬೆಂಗಳೂರು, ಡಿ. 10 : ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಡಿ 12 ರಂದು ಸಂಜೆ 7.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಕಲಾಂ ಮತ್ತು ರೊದ್ದಂ ನರಸಿಂಹ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಿದೆ.
ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳಾಗಿರುವ ರಾಮೇಶ್ವರ ಠಾಕೂರ್ ಅವರು ನಿವೃತ್ತ ರಾಷ್ಟ್ರಪತಿ, ಭಾರತರತ್ನ ಡಾ ಎ ಪಿ ಜೆ ಅಬ್ಧುಲ್ ಕಲಾಂ ಹಾಗೂ ಪುಣೆಯ ಜವಾಹರ್ ಲಾಲ್ ನೆಹರು ಮುಂದುವರೆದ ವೈಜ್ಞಾನಿಕ ಸಂಶೋಧನಾ ಕೇಂದ್ರದ ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಚೆರ್ ಮನ್, ಪದ್ಮಭೂಷಣ ಡಾ. ರೊದ್ದಂ ನರಸಿಂಹ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ಧುಲ್ ಕಲಾಂ ಅವರಿಗೆ 2002 ರ ಎಪ್ರಿಲ್ 20 ರಂದು ಹಾಗೂ ವಿಜ್ಞಾನಿ ರೊದ್ದಂ ನರಸಿಂಹ ಅವರಿಗೆ 2008ರ ಮಾರ್ಚ್ ನಲ್ಲಿ 7 ರಂದು ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications