ಕರವೇ ನಾರಾಯಣಗೌಡರಿಗೆ ಸೇರಿದ್ದು
ಬೆ೦ಗಳೂರು, ಡಿ 10 : ಕರ್ನಾಟಕ ರಕ್ಸಣಾ ವೇದಿಕೆ ಟಿ ಎ ನಾರಾಯಣಗೌಡ ಬಣದ್ದು ಎ೦ದು ಹೈಕೋರ್ಟ್ ಮಹತ್ವದ ತೀರ್ಮಾನ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆ ತಮಗೆ ಸೇರಿದ್ದು ಎ೦ದು ಶಿವರಾಮೇಗೌಡ ಹಾಗೂ ಎ ಪಿ ಶ್ರೀಧರ್ ಎ೦ಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರಾಮಮೋಹನ ರೆಡ್ಡಿ ಅವರ ಪೀಠ ಈ ಮಹತ್ವದ ತೀರ್ಮಾನ ಪ್ರಕಟಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯು ತಮಗೇ ಸೇರಿದ್ದು ಎ೦ದು ಶಿವರಾಮೇಗೌಡ ಬಣ ಹಾಗೂ ನಾರಾಯಣಗೌಡ ಬಣ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಎರಡೂ ಬಣದ ದಾಖಲೆಗಳನ್ನು ಗಣನೆಗೆ ತೆಗೆದುಕೊ೦ಡ ಪೀಠ ನಾರಾಯಣಗೌಡ ಬಣದ ಲೆಕ್ಕಪತ್ರಗಳನ್ನು ಪರೀಕ್ಷಿಸಿ ಕರ್ನಾಟಕ ರಕ್ಸಣಾ ವೇದಿಕೆ ನಾರಾಯಣಗೌಡ ಬಣದ್ದು ಎ೦ದು ಆದೇಶ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications