ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಖಿಲ್ ಗೌಡ ಶೀಘ್ರ ರಾಜಕೀಯ ಅಂಗಳಕ್ಕೆ

By Staff
|
Google Oneindia Kannada News

nikhil gowda
ಬೆಂಗಳೂರು, ಡಿ.10: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ಪದವಿ ವಿದ್ಯಾರ್ಥಿ ನಿಖಿಲ್ ಗೌಡ ಶೀಘ್ರದಲ್ಲಿಯೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆಯೇ? ಹೌದು ಎನ್ನುತ್ತದೆ ಗೌಡರ ಕುಟುಂಬ ವಲಯ.

ನಿಮಗೆ ಗೊತ್ತಿರಬೇಕು, ಕುಮಾರಸ್ವಾಮಿ ರಾಜ್ಯ ಅಧಿಕಾರ ಚುಕ್ಕಾಣಿ ಹಿಡಿದ ಸುವರ್ಣ ಕಾಲ. ಅವರ ಪುತ್ರ ನಿಖಿಲ್ ಗೌಡ ಸ್ನೇಹಿತರೊಂದಿಗೆ ಸೇರಿ ಬೆಂಗಳೂರಿನ ಎಂಪೈರ್ ಹೋಟೆಲ್ ಮೇಲೆ ದಾಂಧಲೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ. ಆತನ ದಾಂಧಲೆಗೆ ವ್ಯಾಪಕವಾಗಿ ಟೀಕೆ ಗಳು ಸುರಿಮಳೆ ವ್ಯಕ್ತವಾಗಿತ್ತು. ಇದೀಗ ಇದೇ ನಿಖಿಲ್ ಗೌಡ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾನೆ. ನಿಖಿಲ್ ಈ ಸಲ ಯಾವುದೇ ದಾಂಧಲೆ ಮಾಡಿ ಸುದ್ದಿಯಲ್ಲಿಲ್ಲ. ಬದಲಾಗಿ ತಾತ ಮತ್ತು ತಂದೆಯ ಹಾಗೆ ಸಾರ್ವಜನಿಕ ಜೀವನ ಕಾಲಿರಿಸಲು ಕಾತುರದಿಂದ ಕಾಯುತ್ತಿದ್ದಾನೆ.

ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಮರುಚುನಾವಣೆಗಾಗಿ ಮಧುಗಿರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಖಿಲ್ ಕೂಡಾ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೇವೇಗೌಡರ ಮೂರನೇ ತಲೆಮಾರಿನ ಕುಡಿಯೊಂದು ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಪಡೆದಂತಾಗುತ್ತದೆ. ಕೃಷಿಕ ಕುಟುಂಬದ ಹಿನ್ನೆಲೆಯ ಹಾಸನ ಜಿಲ್ಲೆಯ ಹರದನಹಳ್ಳಿ ದೊಡ್ಡೆಗೌಡರ ಪುತ್ರ ದೇವೇಗೌಡರು 70 ದಶಕದಲ್ಲಿ ರಾಜಕೀರಣಕ್ಕೆ ಪ್ರವೇಶಿಸಿದರು.

ಅಲ್ಲಿಂದ ಆರಂಭವಾದ ಅವರ ರಾಜಕೀಯ ಆಭಿಯಾನ ಇನ್ನೂ ಮುಂದುವರೆಯುತ್ತಲೆ ಇದೆ. ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಗೌಡರು, ಶಾಸಕ, ಸಚಿವ, ಮುಖ್ಯಮಂತ್ರಿ ಹಾಗೂ ದೇಶಧ ಪ್ರಧಾನಮಂತ್ರಿ ಹುದ್ದೆಯನ್ನೂ ತಲುಪಿದರು. ಸಾರ್ವಜನಿಕ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ಗೌಡರು, ಅಂಜದೆ, ಅಳುಕದೆ, 77 ಪ್ರಾಯದಲ್ಲೂ ಇನ್ನೂ ಸಕ್ರಿಯ ರಾಜಕಾರಣದಲ್ಲಿ ಮುಂದುವೆರದಿದ್ದಾರೆ. ಕುಟುಂಬ ಸದಸ್ಯರಿಗಾಗಿ ಅನೇಕ ಮುಖಂಡರಿಗೆ ಅನ್ಯಾಯ ಮಾಡಿರುವ ಟೀಕೆಗೂ ಗೌಡರು ಗುರಿಯಾಗಿದ್ದಾರೆ.

ಗೌಡರ ಮೂರನೇ ತಲೆಮಾರು ನಿಖಿಲ್ ಗೌಡ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿವಾಗ ಅವರೊಂದಿಗೆ ಇದ್ದರು. ಒಂದು ಮೂಲಗಳು ಪ್ರಕಾರ, 21 ರ ಹರೆಯ ನಿಖಿಲ್ ಗೌಡನನ್ನು ಮರುಚುನಾವಣೆಯ ನಂತರ ಮುಂದಿನ ದಿನಗಳಲ್ಲಿ ಸಾರ್ವಜನಿಕ ಬದುಕಿಗೆ ಕರೆತರುವ ಬಯಕೆ ಕುಮಾರಸ್ವಾಮಿ ಹಾಗೂ ಅನಿತಾ ಅವರಿಗೆ ಇದೆ ಎಂದು ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X