ದ್ರೌಪದಿ ಹೇಳಿಕೆ, ಧನಂಜಯ ಕ್ಷಮೆಯಾಚನೆ
ಬೆಂಗಳೂರು, ಡಿ. 10 : ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ ವಕ್ತಾರ ಧನಂಜಯ ಕುಮಾರ್ ಕ್ಷಮೆಯಾಚಿಸಿದ್ದಾರೆ.
ಮಹಿಳೆಯರಿಗೆ ತಾಯಿ ಮತ್ತು ಸಹೋದರಿ ಸ್ಥಾನ ಕೊಟ್ಟು ಗೌರವದಿಂದ ನಡೆಸಿಕೊಳ್ಳುವುದು ನಮ್ಮ ಸಂಸ್ಕೃತಿ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ತಮ್ಮ ಹೇಳಿಕೆಯಿಂದ ಅನಿತಾ ಕುಮಾರಸ್ವಾಮಿ ಅವರ ಮನಸ್ಸಿಗೆ ನೋವಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ. ಅವರು ಚುನಾವಣೆಗೆ ಸ್ಪರ್ಧಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಧನಂಜಯಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಈ ವಿಷಯದಲ್ಲಿ ನೀಡಿರುವ ಹೇಳಿಕೆ ನೋಡಿದರೆ ಮರುಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಒಳಒಪ್ಪಂದ ಆಗಿರುವುದು ಸ್ಪಷ್ಟವಾಗಿದೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸದಿರುವುದು ಮತ್ತಷ್ಟು ಪುಷ್ಟೀಕರಿಸುತ್ತದೆ ಎಂದು ಧನಂಜಯಕುಮಾರ್ ಆರೋಪಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಸ್ಪರ್ಧಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಧನಂಜಯಕುಮಾರ್, ಅನಿತಾ ಅವರನ್ನು ದ್ರೌಪದಿ ಎಂದು ಹೆಸರಿಸಿ ಟೀಕೆ ಮಾಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಅನಿತಾರನ್ನು ದ್ರೌಪದಿಗೆ ಹೋಲಿಕೆ ಸರಿಯಲ್ಲ
ಜೆಡಿಎಸ್ ಅಪ್ಪ, ಮಕ್ಕಳ, ಸೊಸೆ ಪಕ್ಷ, ಅಶೋಕ್












Click it and Unblock the Notifications