ತಾಜ್ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ
ಮುಂಬೈ, ಡಿ. 9 : ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್ ನ ಗ್ರಹಗತಿ ನೆಟ್ಟಗಿದ್ದ ಹಾಗೆ ಕಾಣುತ್ತಿಲ್ಲ. ಹೋದ ತಿಂಗಳ ಉಗ್ರರ ಅಟ್ಟಹಾಸದಿಂದ ತತ್ತರಿಸಿ ಹೋಗಿದ್ದ ಈ ಹೋಟೆಲ್ ನಲ್ಲಿ ಇಂದು ನಸುಕಿನಲ್ಲಿ ಹೊಸ ಕಟ್ಟಡದ 21 ಮತ್ತು 22ನೇ ಅಂತಸ್ತಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ಎರಡು ಅಂತಸ್ತಿನಲ್ಲಿ ಯಾರೂ ಇರದ ಕಾರಣ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಈ ಅಗ್ನಿ ದುರಂತ ಸಂಭವಿಸಿದೆ ಎಂದು ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ಹತೋಟಿ ತರುವ ಕೆಲಸದಲ್ಲಿ ತೊಡಗಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಭಯ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications