ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಆಟಗಾರರಿಗೆ ಅಭೂತಪೂರ್ವ ಭದ್ರತೆ

By Staff
|
Google Oneindia Kannada News

ಚೆನ್ನೈ, ಡಿ. 9 : ಎರಡು ಟೆಸ್ಟ್ ಆಡಲು ಭಾರತಕ್ಕೆ ಸೋಮವಾರ ಬಂದಿಳಿದ ಇಂಗ್ಲೆಂಡ್ ತಂಡಕ್ಕೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. (ಡಿ.11) ಗುರುವಾರದಿಂದ ಆರಂಭವಾಗುವ ಪ್ರಥಮ ಟೆಸ್ಟ್ ಗೆ ಉಭಯ ಆಟಗಾರರ ಭದ್ರತೆಗಾಗಿ ಅಭೂತಪೂರ್ವ ಭದ್ರತೆಯನ್ನು ಏರ್ಪಡಿಸಲಾಗಿದೆ.

ಇಂಗ್ಲೆಂಡ್ ತಂಡವೊಂದಕ್ಕೆ 5000 ಪೊಲೀಸರನ್ನು ನಿಯೋಜಿಸಲಾಗಿದ್ದು, 300 ಮಂದಿ ವಿಶೇಷ ತರಬೇತಿ ಪಡೆದ ಕಮಾಂಡೋಗಳು ಆಟಗಾರರ ಮೇಲೆ ಕಣ್ಗಾವಲು ಇರಿಸಲು ನೇಮಿಸಲಾಗಿದೆ. ತಮಿಳುನಾಡು ಪೊಲೀಸರು ಈಗಾಗಲೇ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದು, ಕ್ರೀಡಾಂಗಣದ ಸುತ್ತ ತಪಾಸಣೆ ನಡೆಸಿದೆ. ಇಂಗ್ಲೆಂಡ್ ತಂದ ಆಟಗಾರರಿಗೆ ಕ್ರೀಡಾಂಗಣ ಮತ್ತು ಅವರು ಉಳಿದುಕೊಳ್ಳುವ ಹೋಟೆಲ್ ಸುತ್ತ ಮುತ್ತ ಸೇರಿ ಸುಮಾರು 5000 ಪೋಲೀಸರನ್ನು ನಿಯೋಜಿಸಲಾಗಿದೆ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಪಿ ಬಾಲಸುಬ್ರಮಣ್ಯಮ್ ತಿಳಿಸಿದ್ದಾರೆ.

ಆಟಗಾರರು ಉಳಿದುಕೊಳ್ಳುವ ಹೋಟೆಲ್ ನಲ್ಲಿ 300 ವಿಶೇಷ ತರಬೇತಿ ಪಡೆದ ಕಮಾಂಡೋಗಳು ಕಾವಲಿಗೆ ಹಾಕಲಾಗಿದೆ. 1000 ಪೊಲೀಸರನ್ನು ಹೋಟೆಲ್ ಸುತ್ತಮುತ್ತ ನಿಯೋಜಿಸಲಾಗಿದೆ. ಈ ಭದ್ರತೆ ಆಟದ ಕೊನೆಯ ದಿನ ಅಂದರೆ ಡಿ. 15ರ ವರೆಗೆ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಕಳೆದ ನ 26 ರಂದು ಮುಂಬೈ ನಲ್ಲಿ ನಡೆದ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ ಭದ್ರೆತೆ ಕೊರತೆ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಹಿಂತಿರುಗಿತ್ತು. 7 ಏಕದಿನ ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಇನ್ನೆರಡು ಪಂದ್ಯಗಳನ್ನು ಆಡಬೇಕಿತ್ತು. ಆದರೆ ಮುಂಬೈ ದಾಳಿಯ ನಂತರ ಸ್ವದೇಶಕ್ಕೆ ತೆರಳಿದ್ದರಿಂದ ಆ ಪಂದ್ಯಗಳು ರದ್ದಾಗಿತ್ತು. ಎರಡು ಟೆಸ್ಟ್ ಆಡಲಿದ್ದು, ಒಂದು ಚೆನ್ನೈ ಇನ್ನೊಂದು ಟೆಸ್ಟ್ ಮೊಹಾಲಿಯಲ್ಲಿ ನಡೆಯಲಿದೆ.

(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X