ಪಾಕ್ ಧ್ವಜ ಹಾರಾಟ,ಬಿಜಾಪುರ ಬಂದ್
ಬಿಜಾಪುರ, ಡಿ.8 : ಶನಿವಾರ ರಾತ್ರಿ ನಗರದ ಗಾಂಧಿ ಚೌಕ್ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಪಾಕ್ ಧ್ವಜ ಹಾರಾಟ ಘಟನೆಯನ್ನು ಖಂಡಿಸಿ ಡಿ.10 ರಂದು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಇಂದು ಪ್ರತಿಭಟನೆ ನಡೆಸಿದ ಹಿಂದುಪರ ಸಂಘಟನೆಗಳು ಗಾಂಧಿ ಚೌಕ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರಲ್ಲದೇ, ಪಾಕ್ ಧ್ವಜ ಹಾರಿಸಿ ದೇಶದ್ರೋಹ ಕೃತ್ಯ ಎಸಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದರು.
ಕೋಮುಭಾವನೆ ಪ್ರಚೋದಿಸುವ ಭಿತ್ತಿಪತ್ರಗಳು ಅಂಟಿಸಿದ ಬೆನ್ನಲ್ಲೇ ಶನಿವಾರ ರಾತ್ರಿ ನಗರದ ಆಯಕಟ್ಟಿನ ಪ್ರದೇಶಗಳಾದ ಟಪ್ಪು ಸುಲ್ತಾನ್ ವೃತ್ತ, ಮನಗೂಳಿ ಅಗಸಿಯ ಬಳಿ ಕೆಲ ಕಿಡಿಗೇಡಿಗಳು ಪಾಕ್ ಧ್ವಜ ಹಾರಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ತಿಳಿಯುತ್ತಿದ್ದಂತೆಯೇ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಹಿಂದು ಪರ ಸಂಘಟನೆಗಳು ಕಿಡಿಗೇಡಿಗಳ ಕೃತ್ಯ ಖಂಡಿಸಿ ಭಾನುವಾರವೇ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಹೇಳಿ ಜಿಲ್ಲಾ ವರಿಷ್ಠ ಅರುಣ ಚಕ್ರವರ್ತಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದರು.
ದೇಶದ್ರೋಹ ಕೆಲಸ ಮಾಡಿರುವ ಆರೋಪಿಗಳನ್ನು 24 ಗಂಟೆಯೊಳೆಗ ಬಂಧಿಸದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಶ್ರೀರಾಮಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications