ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರ ಏಪ್ರಿಲ್-ಮೇ ನಲ್ಲಿ ಲೋಕಸಭೆ ಚುನಾವಣೆ

By Staff
|
Google Oneindia Kannada News

ನವದೆಹಲಿ, ಡಿ. 8 : 2009ರ ಏಪ್ರಿಲ್ ಹಾಗೂ ಮೇ ತಿಂಗಳ ಮಧ್ಯಭಾಗದಲ್ಲಿ ದೇಶದ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಎನ್ ಗೋಪಾಲಸ್ವಾಮಿ ತಿಳಿಸಿದ್ದಾರೆ. ಇಂದು ನಡೆಯಲಿರುವ ಐದು ರಾಜ್ಯಗಳ ಫಲಿತಾಂಶಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸಂಜೆ ವೇಳೆಗೆ ಸಂಪೂರ್ಣ ಫಲಿತಾಂಶ ದೊರೆಯಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳಲ್ಲಿ ತೊಡಗಿದ್ದು, ಇಷ್ಟರಲ್ಲಿಯೇ ಅಧಿಕೃತವಾಗಿ ಚುನಾವಣೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಮಧ್ಯಪ್ರದೇಶ, ರಾಜಸ್ತಾನ, ಮಿಜೋರಾಂ, ದೆಹಲಿ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ನ. 14 ರಿಂದ ಡಿ. 4ರ ವರೆಗೆ ಚುನಾವಣೆಗಳು ನಡೆದಿವೆ. ನ. 14 ರಂದು ಛತ್ತೀಸ್ ಗಢದಲ್ಲಿ ಆರಂಭವಾದ ಮತದಾನ ಕಾರ್ಯ ಡಿ. 4 ರ ವರೆಗೆ ನಡೆದವು. ಚುನಾವಣೆಯಲ್ಲಿ ಶೇ. 68 ರಷ್ಟು ಅಂದರೆ 9.8 ಮಿಲಿಯನ್ ಮತದಾರರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಗೋಪಾಲಸ್ವಾಮಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ರಾಜಸ್ತಾನದಲ್ಲಿ ಕಮಲ ಧೂಳಿಪಟ, ಕೈ ಮೇಲುಗೈ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X