ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಕೇಸರಿಗೆ ಜೈ; ಕೈ ವಶಕ್ಕೆ ರಾಜಸ್ತಾನ

By Staff
|
Google Oneindia Kannada News

ನವದೆಹಲಿ, ಡಿ. 8 : ರಾಜಸ್ತಾನದಲ್ಲಿ ಗೆಲುವಿನ ಗುರಿ ಮುಟ್ಟಲು ಕಾಂಗ್ರೆಸ್ ಗೆ ಮೂರೇ ಗೇಣು, ಮಿಜೋರಾಂ ನಲ್ಲಿ ಕಾಂಗ್ರೆಸ್ 24 ಸ್ಥಾನಗಳಲ್ಲಿ ವಿಜಯದ ನಗೆ ಬೀರಿದೆ. ಮಧ್ಯಪ್ರದೇಶದಲ್ಲಿ ಕಮಲ ಮತ್ತೊಮ್ಮೆ ಅರಳಿದೆ. ದೆಹಲಿ 'ಕೈ' ಚಳಕದ ಜತೆಗೆ ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.

ರಾಜಸ್ತಾನ(200)

ಕಾಂಗ್ರೆಸ್ - 79ಗೆಲುವು ( 19 ಕಡೆ ಮುನ್ನೆಡೆ)
ಬಿಜೆಪಿ - 58 (20 ಕಡೆ ಮುನ್ನೆಡೆ)
ಬಿಎಸ್ಪಿ - 6
ಸಿಪಿಐಎಂ - 2
ಜೆಡಿಯು - 1
ಸಮಾಜವಾದಿ ಪಕ್ಷ - 1
ಪಕ್ಷೇತರರು - 13

ದೆಹಲಿ(69)

ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಈಗಾಗಲೇ 32 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 16 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಫಲವಾಗಿದೆ. ಬಿಎಸ್ಪಿ ಮತ್ತು ಐಎನ್ ಎಲ್ಡಿ ಪಕ್ಷಗಳು ಕೂಡಾ ಖಾತೆ ತೆಗೆದಿದ್ದು, ತಲಾ ಒಂದೊಂದು ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದಾರೆ.

ಮಧ್ಯಪ್ರದೇಶ(230)

ಬಿಜೆಪಿ ಮತ್ತೆ ತನ್ನ ರೆಕ್ಕೆ ಬಿಚ್ಚಿಕೊಂಡಿದೆ. 230 ಕ್ಷೇತ್ರಗಳಲ್ಲಿ 55 ಕಡೆ ಗೆದ್ದು, 83 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 22 ಕಡೆ ಗೆದ್ದು, 46 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಸಾಧಿಸಿದೆ. ಉಮಾಭಾರತಿ ಪಕ್ಷದ ಅನೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆಲುವು ಸಾಧಿಸಿದ್ದಾರೆ.

ಛತ್ತೀಸ ಗಢ(90)

ಛತ್ತೀಸ್ ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಯತ್ನ ನಡೆಸಿದೆ. ಮೊದಮೊದಲು ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ಪಕ್ಷ ನಂತರ ಬಿಜೆಪಿ ಹೊಡೆತಕ್ಕೆ ತತ್ತರಿಸಿತು. ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ ಬಹುಮತ ಗಳಿಸುವತ್ತ ಸಾಗಿದೆ. 90 ಕ್ಷೇತ್ರಗಳಲ್ಲಿ 47 ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದೆ. 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಸಾಧಿಸಿದೆ. ಹಾಗೂ ಸಿಪಿಐ, ಬಿಎಸ್ ಪಿ, ಎನ್ ಸಿಪಿ ಪಕ್ಷಗಳು ಖಾತೆಗಳನ್ನು ತೆರೆದಿದ್ದು, 6 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿವೆ. ಬಿಜೆಪಿ 50 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸ್ಪಷ್ಟ ಚಿತ್ರಣ ಕಂಡು ಬಂದಿದೆ. ಕಳೆದ ಚುನಾವಣೆಯಲ್ಲೂ ಕೂಡಾ ಬಿಜೆಪಿ 50 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು. ಈ ಚುನಾವಣೆಯಲ್ಲಿ ಕೂಡಾ ಅದೇ ಸಂಖ್ಯೆ ಬರುವ ಸಾಧ್ಯತೆಗಳಿವೆ.

ಮಿಜೋರಾಂ(40)

ಮಿಜೋರಾಂನಲ್ಲಿ ಈಗಾಗಲೇ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. 4 ಮಂದಿ ಮುನ್ನೆಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಲಾಲ್ತನ್ ಹವ್ಲಾ ಜಯಭೇರಿ ಭಾರಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಹಾಗೂ ಯುನೈಟೆಡ್ ಡೆಮಾಕ್ರಟಿಕ್ ಅಲಯನ್ಸ್ ನ ಮುಖ್ಯಸ್ಥ ಲಾಲ್ಡುಮಾ ಥಂಗಾ ಸೋಲನುಭಿಸಿದ್ದಾರೆ. ಎಂಎನ್ ಎಫ್ 4 ಕಡೆ ಗೆದ್ದು, 1 ಕಡೆ ಮುನ್ನೆಡೆ ಪಡೆದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X