ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹವ್ಲಾ ಜಯಭೇರಿ

By Staff
|
Google Oneindia Kannada News

ನವದೆಹಲಿ, ಡಿ. 8 : ಮಿನಿ ಮಹಾಸಮರವೇ ಎನಿಸಿರುವ ಐದು ರಾಜ್ಯಗಳ ಫಲಿತಾಂಶ ಹೊರಬೀಳತೊಡಗಿವೆ, ರಾಜಸ್ಥಾನದಲ್ಲಿ ಬಿಜೆಪಿ ಮುಖಭಂಗ ಅನುಭವಿಸುವ ಸಾಧ್ಯತೆ. ದೆಹಲಿ ಕೈ ಮತ್ತು ಕಮಲಕ್ಕೆ ತಿಕ್ಕಾಟ, ಮಿಜೋರಾಂ ನಲ್ಲಿ ಕಾಂಗ್ರೆಸ್ ಮೈಲುಗೈ ಹಾಗೂ ಛತ್ತೀಸ್ ಗಢದಲ್ಲಿ ಬಿಜೆಪಿಯ ರಮಣಸಿಂಗ್ ಮತ್ತೆ ಮುಖ್ಯಮಂತ್ರಿಯಾಗುವ ಸಂಭವ ಕಂಡು ಬಂದಿದೆ.

ಮಿಜೋರಾಂ ನ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಗಳ ಕಾಂಗ್ರೆಸ್ ಲಾಲ್ತನ್ ಹವ್ಲಾ ಪ್ರಥಮವಾಗಿ ಜಯಭೇರಿ ಬಾರಿಸಿದ್ದಾರೆ. ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿ ಮುಂದುವರೆದಿವೆ. ಬಿಜೆಪಿ ಒಂದು ಕೈ ಮುಂದಾಗುವ ಸಾಧ್ಯತೆಗಳಿವೆ. ರಾಜಸ್ಥಾನದಲ್ಲಿ ಬಿಜೆಪಿ ಹೀನಾಯ ಸೋಲು ಕಾಣುವ ಎಲ್ಲ ಲಕ್ಷಣಗಳಿವೆ. 200 ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಾಗಲೇ 89 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿದ್ದರೆ, ಬಿಜೆಪಿ ಕೇವಲ 62 ಸ್ಥಾನಗಳಲ್ಲಿ ಮುಂದಿದೆ.

ದೆಹಲಿಯಲ್ಲಿ ಕಾಂಗ್ರೆಸ್ 31 ಸ್ಥಾನ. ಮುನ್ನೆಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 28 ಸ್ಥಾನಗಳಲ್ಲಿ ಮುಂದಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ತನ್ನ ಪಾರುಪತ್ಯ ಮರೆಯತೊಡಗಿದೆ. 86 ಬಿಜೆಪಿ, ಕಾಂಗ್ರೆಸ್ 42 ಸ್ಥಾನಗಳಲ್ಲಿ ಮುಂದಿದೆ. ಛತ್ತೀಸ್ ಗಢದಲ್ಲಿ ಬಿಜೆಪಿ 37, ಕಾಂಗ್ರೆಸ್ 36 ಸ್ಥಾನದಲ್ಲಿ ಮುನ್ನಡೆ ಪಡೆದಿದೆ. (ಸೂ: ಅಂಕಿಅಂಶಗಳು ಸಮಯ 10 ಗಂಟೆಯ ಫಲಿತಾಂಶದಂತೆ)
(ದಟ್ಸ್ ಕನ್ನಡ ವಾರ್ತೆ)

ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಫಲಿತಾಂಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X