ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರು ಪಾಕ್ ಪ್ರಜೆಗಳು, ಯುಎಸ್ ರಕ್ಷಣಾ ಇಲಾಖೆ

By Staff
|
Google Oneindia Kannada News

Pak terrorist Azam Amir Kasav
ವಾಷಿಂಗ್ಟನ್, ಡಿ. 6 : ನವೆಂಬರ್ 26ರಂದು ಮುಂಬೈನಲ್ಲಿ ವಿಧ್ವಂಸಕ ಕೃತ್ಯವೆಸಗಿ 200ಕ್ಕೂ ಹೆಚ್ಚಿನ ಭಾರತೀಯರನ್ನು ಬಲಿ ತೆಗೆದುಕೊಂಡ ಉಗ್ರಗಾಮಿಗಳು ಪಾಕಿಸ್ತಾನದ ಪ್ರಜೆಗಳೆಂಬ ವಿಷಯವನ್ನು ಅಮೆರಿಕದ ರಕ್ಷಣಾ ಇಲಾಖೆಯ ಮಖ್ಯಸ್ಥರು ದೃಢಪಡಿಸಿದ್ದಾರೆ.

ಈ ಹೇಳಿಕೆಯಿಂದಾಗಿ ಭಯೋತ್ಪಾದಕರು ಪಾಕಿಸ್ತಾನದ ಉಗ್ರಗಾಮಿಗಳೆಂಬ ಭಾರತದ ವಾದಕ್ಕೆ ಬಲಬಂದಂತಾಗಿದೆ. ಆ ಕೃತ್ಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂದೇ ವಾದಿಸುತ್ತಿದ್ದ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ.

ಭಾರತ ಪ್ರವಾಸದ ನಂತರ ಪಾಕಿಸ್ತಾನಕ್ಕೆ ತೆರಳಿದ ಅಮೆರಿಕಾದ ವಿದೇಶಾಂಗ ಸಚಿವೆ ಕಂಡೋಲೀಸಾ ರೈಸ್ ಮುಂದೆ ಪಾಕಿಸ್ತಾನದ ನಾಯಕರುಗಳೇ ಉಗ್ರಗಾಮಿಗಳು ಪಾಕ್ ಪ್ರಜೆಗಳೆಂದು ಒಪ್ಪಿಕೊಂಡಿರುವುದನ್ನು ಅಮೆರಿಕಾದ ರಕ್ಷಣಾ ಇಲಾಖೆ ಬಹಿರಂಗಪಡಿಸಿದೆ. ಈ ವಿಷಯವನ್ನು ಭಾರತದ ರಕ್ಷಣಾ ಸಚಿವ ಎಕೆ ಆಂಟೋನಿ ಮತ್ತು ಪ್ರಧಾನಿ ಮನಮೋಹನ ಸಿಂಗ್ ಅವರಿಗೂ ಅಮೆರಿಕಾದ ರಕ್ಷಣಾ ಇಲಾಖೆ ತಿಳಿಸಿದೆ.

ಅನೇಕ ವರ್ಷಗಳಿಂದ ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಭಾರತ ಮಾತ್ರ ಪಾಕಿಸ್ತಾನದಲ್ಲಿ ಬೀಡುಬಿಟ್ಟಿರುವ 20 ಮೋಸ್ಟ್ ವಾಂಟೆಡ್ ಉಗ್ರಗಾಮಿಗಳನ್ನು ತನಗೆ ಒಪ್ಪಿಸಬೇಕೆಂದು ಪಟ್ಟುಹಿಡಿದಿದೆ. ಇಲ್ಲಿಯವರೆಗೆ ಪಾಕಿಸ್ತಾನ ಭಾರತದ ಆಗ್ರಹಕ್ಕೆ ಸೊಪ್ಪು ಹಾಕಿಲ್ಲ. ಮುಂಬೈ ಸ್ಫೋಟದಲ್ಲಿ ಭಾಗಿಯಾಗಿರುವ ಉಗ್ರಗಾಮಿಗಳು ತಮ್ಮ ಪ್ರಜೆಗಳೆಂಬ ವಿಷಯವನ್ನೂ ಬಹಿರಂಗವಾಗಿ ಪಾಕಿ ಒಪ್ಪಿಕೊಳ್ಳುತ್ತಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X