ಜಿಹಾದಿಗಳ ಕೆರಳಿಸಲು ಮೋದಿ ಭಾಷಣ ಬಳಕೆ
ನವದೆಹಲಿ, ಡಿ. 4 : ಪಾಕ್ ಭಯೋತ್ಪಾದಕರಿಗೆ ಜಿಹಾದ್ ಮತ್ತು ಪಾಕಿಸ್ತಾನ ವಿರುದ್ಧ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯ ಅವರು ಮುಸ್ಲಿಂ ವಿರೋಧಿಸಿ ಮಾತನಾಡಿರುವ ವೀಡಿಯೊ ಕ್ಲಿಪ್ ಗಳನ್ನೂ ತೋರಿಸಿ ಉತ್ತೇಜಿಸಲಾಗುತ್ತಿತ್ತು ಎಂದು ಮುಂಬೈ ಕೃತ್ಯಗಳಲ್ಲಿ ಬಂಧಿತನಾಗಿರುವ ಭಯೋತ್ಪಾದಕ ಅಜ್ಮಲ್ ಅಮೀರ್ ಕಸವ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ಗೋದ್ರಾ ಹತ್ಯಾಕಾಂಡ ಮತ್ತು ಮುಸ್ಲಿಂರ ವಿರುದ್ದ ನಡೆಯುತ್ತಿರುವ ದೌರ್ಜನ್ಯಗಳ ಕ್ಲಿಪ್ಪಿಂಗ್ ತೋರಿಸಿ ಭಾರತದಲ್ಲಿ ಕೋಮುಗಲಭೆ ಹೆಚ್ಚಿಸಲು ಉತ್ತೇಜಿಸಲಾಗುತ್ತಿತ್ತು ಎಂದು ಬಾಯಿಬಿಟ್ಟಿದ್ದಾನೆ. ಎಲ್ಲ ಉಗ್ರರಿಗೆ ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಅತ್ಯುತ್ತಮ ಮಟ್ಟದ ತರಬೇತಿ ನೀಡಲಾಗುತ್ತಿದೆ. ಭದ್ರತಾ ಪಡೆಗಳ ಜೊತೆಗಿನ ಹೋರಾಟದ ಸಮಯದಲ್ಲಿ ಯಾವ ರೀತಿ ಪ್ರತಿರೋಧ ತೋರಿಸಬೇಕೆನ್ನುವ ತರಬೇತಿ ಕೂಡಾ ನೀಡಲಾಗಿತ್ತು.
ಭದ್ರತಾ ಪಡೆಗಳ ಜೊತೆಗಿನ ಕಾದಾಟದಲ್ಲಿ ಸಾವನ್ನಪ್ಪಿದ 9 ಉಗ್ರರ ಹೆಸರನ್ನು ಬಹಿರಂಗ ಪಡಿಸಿದ್ದು, ಅಜ್ಮಲ್ ಸಾಹೇಬ್, ಚೋಟ ಅಬ್ದುಲ್ ರೆಹಮಾನ್, ಉಮರ್, ಅಬು ಅಲಿ, ಪಹದುಲ್ಲಾ, ಇಸ್ಮಾಯಿಲ್ ಖಾನ್, ಬಡಾ ಅಬ್ದುಲ್ ರೆಹಮಾನ್, ಅಬು ಆಕಾಶ, ಉಮೈರ್ ಎಂಬ ಹೆಸರಿನ ಉಗ್ರರು ಮುಂಬೈನಲ್ಲಿ ಭಯೋತ್ಪಾದನೆ ನಡೆಸಿದ ಕಿರಾತಕರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications