ಮಸೀದಿಯಲ್ಲಿ ಗುಣಿ ತೋಡುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು, ಡಿ. 4 : ಪ್ರಾರ್ಥನಾ ಪ್ರದೇಶದಲ್ಲಿ ಬೆಳಗಿನ ಜಾವ ಗುಣಿ ತೋಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರೇ ಬಂಧಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ಜರುಗಿದೆ.

ಇಲ್ಲಿಂದ 20 ಕಿ.ಮೀ. ದೂರದಲ್ಲಿರುವ ಉಚಿಲ ಎಂಬಲ್ಲಿ ಸೈಯದ್ ಅರಬಿ ಜುಮ್ಮಾ ಮಸೀದಿಯಲ್ಲಿ ಬೆಳಗಿನ ಜಾವದಲ್ಲಿ ಉದಯ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿ ಗುಣಿ ತೋಡುತ್ತಿದ್ದ. ನಿತ್ಯ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡುವವರೊಬ್ಬರು ಗುಣಿ ತೋಡುತ್ತಿರುವುದೇಕೆಂದು ವಿಚಾರಿಸಿದಾಗ, ದೇವರ ಮೂರ್ತಿ ಇಡಲೆಂದು ಹೇಳಿದ್ದಾನೆ.

ಇತರ ಜನರೂ ಸೇರಿ ಮತ್ತಷ್ಟು ವಿಚಾರಿಸಿದಾಗ ತಾನು ಉತ್ತರ ಪ್ರದೇಶದವನಾಗಿದ್ದು, ಬಾಂಬ್ ಇಡುತ್ತಿರುವುದಾಗಿ ಹೇಳಿದ್ದಾನೆ. ಸಾರ್ವಜನಿಕರು ಆತನನ್ನು ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ. 40 ವರ್ಷ ವಯಸ್ಸಿನ ಆತ ಮಾನಸಿಕವಾಗಿ ಅಸ್ವಸ್ಥನಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೂ, ಅವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+