ಬೆಂಗಳೂರು ಹಬ್ಬ ಕೂಡಲೇ ರದ್ದಾಗಲಿ

ಬೆಂಗಳೂರು, ಡಿ. 4 : ಕನ್ನಡ ಸಂಸ್ಕೃತಿ, ಭಾಷೆಯಿಂದ ಯೋಜನ ದೂರ ನಿಲ್ಲುವ ಬೆಂಗಳೂರು ಹಬ್ಬವನ್ನು ರದ್ದು ಮಾಡಿದರೆ ಕ್ಷೇಮ. ಎಪ್ಪತ್ತು ಲಕ್ಷ ಜನಸಂಖ್ಯೆಯ ಈ ಮಾಹಾನಗರದಲ್ಲಿ ಕೆಲವೇ ಸಾವಿರ ಮಂದಿ ನೋಡಿ ನಲಿಯುವ ಹಬ್ಬಕ್ಕೆ ಕರ್ನಾಟಕ ಸರಕಾರ ಟಾಟಾ ಹೇಳಬೇಕು ಎಂದು ದಟ್ಸ್ ಕನ್ನಡ ಆಗ್ರಹಿಸುತ್ತದೆ.

ಇಂಗ್ಲಿಷ್ ಓದುವುದಕ್ಕೆ ಬರೆಯುವುದಕ್ಕೆ ಬಾರದ ಅಪಾರ ಕನ್ನಡ ಜನಸ್ತೋಮ ಬೆಂಗಳೂರಿನಲ್ಲಿದೆ. ಅವರ್ಯಾರಿಗೂ ತಲೆಬುಡ ಅರ್ಥವಾಗದ ಇಂಥ ಹಬ್ಬ ಆಚರಣೆಯಿಂದ ಮೂರು ಕಾಸು ಪ್ರಯೋಜನವಿಲ್ಲ. ಕೆಲವರು ಶ್ರೀಮಂತರು ಮತ್ತು ಪೇಜ್ 3 ಉತ್ಸಾಹಿಗಳಿಗೆ ಮಾತ್ರ ವರ್ಷಕ್ಕೊಮ್ಮೆ ಕೆಲಸ ಸಿಗುವ ಹಬ್ಬ ಖಂಡಿತ ಬೇಡ.

ಈ ಬಾರಿ ಬೆಂಗಳೂರು ಹಬ್ಬವು ಖಾಸಗಿ ಕ್ಷೇತ್ರದಿಂದ ಸರಕಾರದ ಅಂಗಳಕ್ಕೆ ವರ್ಗವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಮಹಾನಗರಪಾಲಿಕೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಮುಖಾಂತರ ಎರಡು ಮೂರು ಕೋಟಿ ರೂಪಾಯಿಗಳನ್ನು ಈ ಹಬ್ಬಕ್ಕಾಗಿ ವ್ಯರ್ಥ ಮಾಡುವುದು ಸಲ್ಲದು.

ಬೆಂದಕಾಳೂರಿನ ಹಳೆಯ ಹಬ್ಬಗಳಾದ ಬಸವನಗುಡಿ ಕಡ್ಲೆಕಾಯಿ ಪರಿಷೆ, ಕರಗ ಮುಂತಾದ ಹಬ್ಬ ಗಬ್ಬಗಳಿಗೆ ಪ್ರಾಮುಖ್ಯತೆ ಕೊಡಬೇಕು, ಬೆಂಗಳೂರು ಹಬ್ಬಕ್ಕೆ ಮಣೆ ಹಾಕುವುದು ಬೇಡ ಎಂಬ ಸಲಹೆಗಳು ಈಗಾಗಲೇ ಸಾಕಷ್ಟು ಕೇಳಿಬಂದಿವೆ. ಆದರೆ, ಕರಗ ಮತ್ತು ಪರಿಷೆಗಳು ಯಾವ ಸರಕಾರದ ಹಂಗೂ ಇಲ್ಲದೆ ಅನೇಕ ವರ್ಷಗಳಿಂದ ತಮ್ಮಷ್ಟಕ್ಕೆ ತಾವು ಸಾಗಿಬಂದಿವೆ. ಸರಕಾರ ಸದ್ಯಕ್ಕೆ ಹಳೆಯ ಹಬ್ಬಗಳ ಬಗೆಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.

ಬೆಂಗಳೂರು ಹಬ್ಬ ಒಂದೇ ಅಲ್ಲ. ಹಂಪಿ, ಕಿತ್ತೂರು, ಧಾರವಾಡ, ಆನೆಗೊಂದಿ, ಖ್ಯಾತಮಾರನಹಳ್ಳಿ ಉತ್ಸವ ಮುಂತಾದ ಅನೇಕ ಹಬ್ಬಗಳ ಹೆಸರಿನಲ್ಲಿ ಸರಕಾರ ಹಣ ವ್ಯಯ ಮಾಡುವುದು ಬಿಟ್ಟು ಬೆಂಗಳೂರಿನ ಕಸ ಎತ್ತುವ ಲಾರಿಗಳ ಸಂಖ್ಯೆ ಜಾಸ್ತಿ ಮಾಡಲಿ. ಒಳಚರಂಡಿ ವ್ಯವಸ್ಥೆ ದುರಸ್ತಿ ಆಗಲಿ. ಇನ್ನು ಕಲಾವಿದರು, ಹಾಡುಗಾರರು ತಮಗೆ ಸಿಗುವ ಛಾನ್ಸ್ ಕಳೆದು ಹೋಯಿತೆಂದು ಬೊಬ್ಬೆ ಹಾಕುವ ಅಗತ್ಯವಿಲ್ಲ. ಅಕ್ಕ ಸಮ್ಮೇಳನ, ಇಂಗ್ಲೆಂಡ್ ಕನ್ನಡ ಬಳಗ ಮುಂತಾದ ಕಡೆಗಳಿಂದ ಕರೆ ಬರುತ್ತವೆ. ಅಲ್ಲಿಗೆ ಹೋಗಲಿ.

ಇಷ್ಟಕ್ಕೂ ಬೆಂಗಳೂರು ಹಬ್ಬವನ್ನು ಕಳೆದ ನಾಲ್ಕೈದು ವರ್ಷಗಳಿಂದ ಶ್ರದ್ಧೆಯಿಂದ ನಡೆಸಿಕೊಂಡು ಬಂದಿರುವ ನಂದಿನಿ ಆಳ್ವ, ಪದ್ಮಿನಿ ರವಿ ಮತ್ತು ಬಳಗಕ್ಕೆ ಅಷ್ಟು ಇಷ್ಟ ಇದ್ದರೆ ಕಲಾವಿದರನ್ನು ಖಾಸಗಿ ಕಂಪನಿಗಳ ಪ್ರಾಯೋಜಕತ್ವದಲ್ಲಿ ಆಯಾ ಕಂಪನಿಯ ಅಂಗಳದಲ್ಲಿ ಹಾಡಿ ಕುಣಿಸಿ ನಲಿಯಲಿ.

ಎಲ್ಲಕ್ಕೂ ಹೆಚ್ಚಾಗಿ ಸರಕಾರದ ಬೊಕ್ಕಸಕ್ಕೆ ಭಾರೀ ತೂತು ಬಿದ್ದಿದೆ. ಬೊಕ್ಕಸ ಬರಿದಾಗಿದೆ ಎಂದು ಮುಖ್ಯಮಂತ್ರಿಗಳೇ ಬಾಯಿಬಿಟ್ಟಿದ್ದಾರೆ. ಸಾಲೋಸಾಲು ಶಾಸಕರು ಲಕ್ಷಗಟ್ಟಲೆ ಬಾಕಿ ಉಳಿಸಿಕೊಂಡು ಸರಕಾರಕ್ಕೆ ನಾಮವಿಕ್ಕುತ್ತಿದ್ದಾರೆ. ಅದನ್ನು ಶಾಸಕರ ಜುಬ್ಬಾ ಜೋಬಿನಿಂದ ಕಕ್ಕಿಸುವ ಕೆಲಸ ಮೊದಲಾಗಲಿ.ಈಗ ಭಯೋತ್ಪಾದನೆಯ ನೆಪದಲ್ಲಿ ದೇಶದಲ್ಲಿ ಮಾರಮ್ಮನ ಹಬ್ಬ ಆಗುತ್ತಿರುವುದರಿಂದ ಬೆಂಗಳೂರು ಹಬ್ಬ ಆಚರಣೆಗೆ ಅರ್ಥವಿಲ್ಲ, ಕಿಮ್ಮತ್ತು ಇಲ್ಲ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ: ಡಿ.4 ರಿಂದ ಬೆಂಗಳೂರು ಹಬ್ಬ - 2008

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+