ಬೆಂಗ್ಳೂರು, ಚೆನ್ನೈ ವಿ. ನಿಲ್ದಾಣ ಮುಂದಿನ ಗುರಿ
ನವದೆಹಲಿ, ಡಿ. 4 : ಬೆಂಗಳೂರು, ದೆಹಲಿ, ಹಾಗೂ ಚೆನ್ನೈ ವಿಮಾನ ನಿಲ್ದಾಣದ ಡಿಸೆಂಬರ್ 6 ಬಾಬರಿ ಮಸೀದಿ ಧ್ವಂಸ ದಿನಾಚರಣೆಯ ದಿನ ಉಗ್ರರು ಆಗಸದ ಮೂಲಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಸುಳಿವು ನೀಡಿದೆ.
ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಕೇಂದ್ರ ರಕ್ಷಣಾ ಸಚಿವಾಲಯ ಸಶಸ್ತ್ರ ಪಡೆಗೆ ನಿಯೋಜನೆಗೆ ಆದೇಶ ನೀಡಿದೆ. ಈ ಸಂಬಂಧ ಆಯಾ ರಾಜ್ಯದ ಗೃಹ ಸಚಿವಾಲಯಕ್ಕೆ ತುರ್ತು ಸಂದೇಶ ರವಾನಿಸಲಾಗಿದೆ.
ಪಾಕಿಸ್ಥಾನದ ಸೇನೆ ಗಡಿಯಲ್ಲಿ ಕಟ್ಟೆಚ್ಚರದಲ್ಲಿದೆಯೆಂಬ ವರದಿಗಳ ಹಿನ್ನಲೆಯಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್.ಒ.ಸಿ) ಕೂಡ ಭಾರಿ ಭದ್ರತೆ ಕೊಡಲಾಗಿದೆ. ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸುವುದು ಮತ್ತು ಕರಾವಳಿಯಲ್ಲಿ ರೇಡಾರಗಳ ವ್ಯವಸ್ಥೆಯನ್ನು ಸದ್ಯದಲ್ಲೇ ಅಳವಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications