ಕಬ್ಬನ್ ಪಾರ್ಕಿನಲ್ಲಿ ರತ್ನನ ಪದಗಳು

ಬೆಂಗಳೂರು,ಡಿ.3:ನಿಸರ್ಗದ ಮಡಿಲಲ್ಲಿ ರತ್ನನ ಪದಗಳನ್ನು ಕೇಳುವ ಮನಸ್ಸಾಗುತ್ತಿದೆಯೇ? ಹಾಗಿದ್ದರೆ 'ಪ್ರಕೃತಿ' ಸಂಸ್ಥೆ ಪ್ರತಿ ಭಾನುವಾರ ಕಬ್ಬನ್ ಉದ್ಯಾನವನದಲ್ಲಿ ನಡೆಸಿಕೊಡುವ ರಸಸಂಜೆ ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ.

ಜಿ.ಪಿ.ರಾಜರತ್ನಂ ವಿರಚಿತ ರತ್ನನ ಪದಗಳನ್ನು ಇದೇ ಭಾನುವಾರ (ಡಿ.7)ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟಾಂಡ್ ನಲ್ಲಿ ಸುಮಧುರ ಗಾಯಕ ರಾಜು ಅನಂತ ಸ್ವಾಮಿ ತಮ್ಮ ಕಂಚಿನ ಕಂಠದಿಂದ ಹಾಡಿ ರಂಜಿಸಲಿದ್ದಾರೆ. 'ಪ್ರಕೃತಿ'ಯ ಮಡಿಲಲ್ಲಿ ಕೂತು ಸಂಜೆ 5 ರಿಂದ ಸಂಜೆ 7 ಗಂಟೆಯ ತನಕ ರತ್ನನ ಪದಗಳನ್ನು ಆಲಿಸುತ್ತಾ ಮೈಮರೆಯಬಹುದು.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಆದರೆ ಯಾವುದೇ ಪ್ಲಾಸ್ಟಿಕನ್ನುಉದ್ಯಾನವನಕ್ಕೆ ತರುವಂತಿಲ್ಲ.ಹುಲ್ಲು ಹಾಸಿನ ಮೇಲೆ ನಡೆದಾಡುವುದು, ಕುಳಿತುಕೊಳ್ಳುವುದು ನಿಷಿದ್ಧ.ಮರಗಿಡಗಳಿಗೆ ಯಾವುದೇ ಹಾನಿ ಮಾಡುವಂತಿಲ್ಲ ಎಂಬುದನ್ನು ಮರೆಯಬೇಡಿ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+