ಹೆಚ್ಚಿನ ಭದ್ರತೆ : ಪ್ರಧಾನಿಗೆ ರಾಜ್ಯದ ಮನವಿ

1) ರಾಷ್ಟ್ರೀಯ ಭದ್ರತಾ ದಳದ (NSG) ಘಟಕವನ್ನು ಕರ್ನಾಟಕದಲ್ಲಿ ತುರ್ತಾಗಿ ಸ್ಥಾಪಿಸಿ.
2) ಇಂಡಿಯಾ ರಿಸರ್ವ್ ಪೊಲೀಸ್ಗೆ ಸೇರಿದ ಮೂರು ತುಕಡಿಗಳನ್ನು ರಾಜ್ಯಕ್ಕೆ ಬೇಗ ನಿಯೋಜಿಸಿ.
3) ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಘಟಕವನ್ನು ಬೆಳಗಾವಿಯಲ್ಲಿ ನೆಲೆಗೊಳಿಸಿರಿ. 4) ಪಶ್ಚಿಮ ಘಟ್ಟಗಳ ಸಾಲಿನುದ್ದಕ್ಕೂ ಚೆಕ್ ಪೋಸ್ಟ್ ಮತ್ತು ಔಟ್ ಪೋಸ್ಟುಗಳನ್ನು ಸ್ಥಾಪಿಸಲು ಮುಂದಾಗಿರಿ.
5) ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಕಚೇರಿಗಳಿರುವುದರಿಂದ ಹಾಗೂ ಭಯೋತ್ಪಾದಕರ ಹಾವಳಿಯ ಸಾಧ್ಯತೆಗಳಿರುವುದರಿಂದ ಈ ಕ್ರಮಗಳನ್ನು ಸನ್ಮಾನ್ಯ ಪ್ರಧಾನಿಗಳು ಈ ಕೂಡಲೇ ಜಾರಿಗೊಳಿಸಬೇಕು.
ನಿಯೋಗದಲ್ಲಿ ಯಾರ್ಯಾರು ಇದ್ದರೆಂಬುದಕ್ಕೆ ಈ ಚಿತ್ರದ ಮೇಲೆ ಕಣ್ಣಾಡಿಸಿ. ಚಿತ್ರಗಳು: ಎಂ.ಎಂ. ಜೋಶಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications