ಉಗ್ರರ ಶವ ಸಂಸ್ಕಾರಕ್ಕೆ ಮುಂಬೈ ಮುಸ್ಲಿಮರ ನಕಾರ
ಮುಂಬೈ, ಡಿ. 2 : ಇತ್ತೀಚಿನ ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಮೃತಪಟ್ಟಿದ್ದ ವಾರಸುದಾರರು ಇಲ್ಲದ ಅನೇಕ ಶವಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು.
ಭದ್ರತಾ ಪಡೆಗಳ ನಡುವಿನ ಕಾದಾಟದಲ್ಲಿ ಸಾವನ್ನಪ್ಪಿದ 9 ಮಂದಿ ಮುಸ್ಲಿಂ ಭಯೋತ್ಪಾದಕರ ಅಂತ್ಯಸಂಸ್ಕಾರಕ್ಕೆ ತಮ್ಮ ಸ್ಮಶಾನದಲ್ಲಿ ಅನುಮತಿ ನೀಡಲು ಮುಂಬೈನ ಇಸ್ಲಾಂ ಸಂಘಟನೆಗಳು ನಿರಾಕರಿಸಿವೆ. ಮುಗ್ದರನ್ನು ಬಲಿತೆಗೆದುಕೊಂಡ ದೇಶದ್ರೋಹಿಗಳು ಭಾರತದಲ್ಲಿನ ಸುಮಾರು 25 ಕೋಟಿ ಮುಸಲ್ಮಾನರನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ದಾವತ-ಇ-ಇಸ್ಲಾಮಿ ಸಂಘಟನೆಯ ಅಧ್ಯಕ್ಷ ಹಮಿದ್ ಅಬ್ದುಲ್ ರಜಾಕ ಆಕ್ರೋಷ ವ್ಯಕ್ತಪಡಿಸಿದ್ದಾರೆ. ದೇಶ ದ್ರೋಹಿ ಕೃತ್ಯ ಎಸಗಿದವರಿಗೆ ತಮ್ಮ ಸ್ಮಶಾನದಲ್ಲಿ ಸಂಸ್ಕಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮುಂಬೈ ಪೋಲಿಸ್ ಕಮೀಷನರ್ ಗೆ ಪತ್ರ ಬರೆದಿರುವ ಇಸ್ಲಾಂ ನಾಯಕರು, ಈ ಭಯೋತ್ಪಾದಕರಿಗೆ ಪೋಲಿಸ್ ಮುಖಾಂತರ ಕೂಡ ನಮ್ಮ ಸ್ಮಶಾನದಲ್ಲಿ ಇವರ ಸಮಾಧಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟಪ ಹಿಡಿದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications